ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್,ನ.5: ಮಾವೋವಾದಿಗಳನ್ನು ಎನ್ಕೌಂಟರಿನಲ್ಲಿ ಕೊಂದ ಪೊಲೀಸರ ಕ್ರಮವನ್ನು ಕೇರಳ ಸರಕಾರದ ಮುಖ್ಯಕಾರ್ಯದರ್ಶಿ ಟಾಮ್ ಜೋಸ್ ಸಮರ್ಥಿಸಿಕೊಂಡಿದ್ದಾರೆ.
ಮಾವೋವಾದಿಗಳನ್ನು ಕೊಲ್ಲದಿದ್ದರೆ ಜನರು ಕೊಲ್ಲಲ್ಪಡುತ್ತಾರೆ. ಪ್ರಜೆಗಳನ್ನು ಮಾವೋವಾದಿ ಭಯೋತ್ಪಾದಕರಿಂದ ಪೊಲೀಸರು ರಕ್ಷಿಸಿದರು ಎಂದು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
2015ರಲ್ಲಿ ಭಾರತದ ಸರಕಾರವನ್ನು ಬುಡಮೇಲುಗೊಳಿಸುವ ಗುರಿಯೊಂದಿಗೆ ಮಾವೋವಾದಿಗಳು ಸಂಘಟಿತರಾಗಿದ್ದಾರೆ. ಇತರ ರಾಜ್ಯಗಳಿಗೆ ಹೋಲಸಿದರೆ ಕೇರಳ ಹೆಚ್ಚು ಸುರಕ್ಷಿತ ಸ್ಥಳ ಎಂದು ಮಾವೋವಾದಿಗಳು ತಿಳಿದುಕೊಂಡಿದ್ದಾರೆ. ಆದ್ದರಿಂದ ಕೇರಳದ ಕಾಡುಗಳಲ್ಲಿ ಮತ್ತು ನಗರಗಳಲ್ಲಿ ಅವರನ್ನು ಬೆಂಬಲಿಸುವವರಿದ್ದಾರೆ.
ಇವರ ವಿರುದ್ಧ ಬಲವಾದ ನಿಗಾವನ್ನು ರಾಜ್ಯದ ಪೊಲೀಸರು ಇರಿಸಿದ್ದಾರೆ. ಇದರ ಭಾಗವಾಗಿ ಪ್ರತಿದಾಳಿಯ ವೇಳೆ ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದಾರೆ. ಈ ಕ್ರಮವನ್ನು ಟೀಕಿಸುವ ಅಗತ್ಯವಿಲ್ಲ ಎಂದು ಟಾಮ್ ಜೋಸ್ ಸಂದರ್ಶನದಲ್ಲಿ ಹೇಳಿದ್ದಾರೆ.












