ಸನ್ಮಾರ್ಗ ವಾರ್ತೆ
ಕೊಲಂಬೊ – ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ಬಲಪಡಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಪರೂಪದ ಪಾತ್ರವನ್ನು ಗೌರವಿಸಿ, ಶನಿವಾರ ಶ್ರೀಲಂಕಾದ ರಾಷ್ಟ್ರಪತಿ ಅನುರ ಕುಮಾರ ದಿಸಾನಾಯಕೆ ಅವರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಶ್ರೀಲಂಕಾ ಮಿತ್ರ ವಿಭೂಷಣ’ ಪ್ರಶಸ್ತಿಯನ್ನು ಪ್ರಧಾನಿಗೆ ಪ್ರದಾನಿಸಿದರು.
ರಾಷ್ಟ್ರಪತಿಗಳ ಸಚಿವಾಲಯದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಈ ಗೌರವ ನನಗೆ ಮಾತ್ರವಲ್ಲ, 140 ಕೋಟಿ ಭಾರತೀಯರ ಗೌರವವಾಗಿದೆ. ಇದು ಭಾರತ-ಶ್ರೀಲಂಕಾ ನಡುವಿನ ಆಳವಾದ ಸ್ನೇಹ ಮತ್ತು ಐತಿಹಾಸಿಕ ಸಂಬಂಧಗಳ ಪ್ರತೀಕವಾಗಿದೆ” ಎಂದು ಹೇಳಿದರು.
ಈ ಪ್ರಶಸ್ತಿಯು 2008ರ ಫೆಬ್ರವರಿಯಲ್ಲಿ ಆಗಿನ ಅಧ್ಯಕ್ಷ ಮಹಿಂದ ರಾಜಪಕ್ಸ ಅವರಿಂದ ಸ್ಥಾಪಿಸಲ್ಪಟ್ಟಿದ್ದು, ಇದನ್ನು ಪುರಸ್ಕೃತವಾಗಿರುವ ಇತಿಹಾಸ ಪ್ರಸಿದ್ಧ ವ್ಯಕ್ತಿಗಳಲ್ಲಿ ಮಾಲ್ಡೀವಿನ ಮಾಜಿ ಅಧ್ಯಕ್ಷ ಮಾಊಮೂನ್ ಅಬ್ದುಲ್ ಗಯೂಮ್ ಹಾಗೂ ದಿವಂಗತ ಪ್ಯಾಲೆಸ್ಟೀನಿಯನ್ ನಾಯಕ ಯಾಸರ್ ಅರಾಫತ್ ಸೇರಿದಂತೆ ಕೆಲ ಪ್ರಮುಖ ನಾಯಕರು ಸೇರಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಈ ಸಂದರ್ಭ ಮಾತನಾಡಿ, “ಈ ಪ್ರಶಸ್ತಿಯು, ಶ್ರೀಲಂಕಾ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತ ನೀಡಿದ ಪರಿಮಿತಿಯಿಲ್ಲದ ಸಹಾಯ ಮತ್ತು ಪ್ರಧಾನಿಯವರ ವೈಯಕ್ತಿಕ ತೊಡಗಿಸಿಕೊಳವಿಕೆಯ ಪರಿಕಲ್ಪನೆಗೆ ಸ್ಮರಣೆಯಾಗಿದೆ” ಎಂದು ವಿವರಿಸಿದರು.
ಪ್ರಶಸ್ತಿಯ ಅಂಗವಾಗಿ, ಪ್ರಧಾನಿಗೆ ಸನ್ಮಾನ ಪತ್ರ ಹಾಗೂ ಶ್ರೇಷ್ಠ ರತ್ನಗಳಿಂದ ಅಲಂಕೃತವಾದ ಬೆಳ್ಳಿಯ ಪದಕವನ್ನು ನೀಡಲಾಯಿತು. ಈ ಪದಕದಲ್ಲಿ ಕಮಲ, ಸೂರ್ಯ, ಚಂದ್ರ, ಗೋಳ ಮತ್ತು ಅಕ್ಕಿ ಚಿಹ್ನೆಗಳ ಜೊತೆಗೆ ಧರ್ಮಚಕ್ರವಿದೆ, ಇದು ಬೌದ್ಧ ಪರಂಪರೆಯ ಹಂಚಿಕೆಯ ಮೂಲಕ ಭಾರತ-ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಸಂಬಂಧವನ್ನೂ ಪ್ರತಿಬಿಂಬಿಸುತ್ತದೆ.












