ರಾಜೀನಾಮೆ ಕೊಡುವ ಧೈರ್ಯ ಎಲ್ಲರಿಗೂ ಇರುವುದಿಲ್ಲ- ರಾಹುಲ್ ಗಾಂಧಿ ರಾಜೀನಾಮೆ ಕುರಿತು ಪ್ರಿಯಾಂಕಾ ಗಾಂಧಿ ಹೇಳಿಕೆ

0
544

ಹೊಸದಿಲ್ಲಿ, ಜು. 4: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಪ್ರಿಯಾಂಕಾ ಗಾಂಧಿ ಶ್ಲಾಘಿಸಿದ್ದಾರೆ. ರಾಹುಲ್ ಏನು ಮಾಡಿದ್ದರೋ ಅದಕ್ಕೆ ಅಷ್ಟು ಧೈರ್ಯ ಇರಬೇಕಾಗುತ್ತದೆ. ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ನೀವು ಶ್ಲಾಘನಾರ್ಹ ಹೆಜ್ಜೆಯನ್ನು ಮುಂದಿಟ್ಟಿದ್ದೀರಿ. ನೀವು ಈಗ ಪಾರ್ಟಿಯ ಮುಖ್ಯಸ್ಥರಲ್ಲ ಮತ್ತು ಹೊಸ ಅಧ್ಯಕ್ಷರಾಗಿ ಹೊಸಬರನ್ನು ಚುನಾಯಿಸಲಾಗುವುದು ಎಂದು ಪ್ರಿಯಾಂಕಾ ಹೇಳಿದರು.

ರಾಹುಲ್ ಗಾಂಧಿ ಸಂಸತ್‍ನ ಪರಿಸರದಲ್ಲಿ ಪತ್ರಕರ್ತರನ್ನು ಉದ್ದೇಶಿ ನಾನೀಗ ಕಾಂಗ್ರೆಸ್ ಅಧ್ಯಕ್ಷರಲ್ಲ. ಹೊಸ ಅಧ್ಯಕ್ಷರನ್ನು ಶೀಘ್ರದಲ್ಲಿ ಚುನಾಯಿಸಲಾಗುವುದು ಎಂದು ತಿಳಿಸಿದರು. ಲೋಕಸಭಾ ಚುನಾವಣೆಯ ನಂತರ ಮೇ 5ರಂದು ಸೇರಿದ್ದ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಕಾರ್ಯಕಾರಿಣಿಯು ಸ್ವೀಕರಿಸಲು ನಿರಾಕರಿಸಿತ್ತು. ರಾಜೀವ್ ಗಾಂಧಿ ತನ್ನ ರಾಜೀನಾಮೆ ನಿರ್ಧಾರದಲ್ಲಿ ಅಚಲರಾಗಿ ನಿಂತಿದ್ದಾರೆ. ಪಾರ್ಟಿಯ ಹಿರಿಯ ನಾಯಕರು ರಾಜೀನಾಮೆಯನ್ನು ವಾಪಸು ಪಡೆಯುವಂತೆ ಒತ್ತಾಯಿಸಿದರೂ ರಾಹುಲ್ ತನ್ನ ನಿರ್ಧಾರವನ್ನು ಬದಲಿಸಿಲ್ಲ.