ಹೈದರಾಬಾದ್, ಜು. 6: ಮುಸ್ಲಿಂ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿ ಸ್ಕಾಲರ್ ಶಿಪ್ ಕೊಡುವ ವಾಗ್ದಾನವನ್ನು ಕೇಂದ್ರ ಸರಕಾರ ಪಾಲಿಸಿಲ್ಲ ಎಂದು ಐಎಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಎಲ್ಲಾ ವರ್ಷ ಒಂದು ಕೋಟಿ ರೂಪಾಯಿ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದರು. ಮತ್ತೆ ಯಾಕೆ ಇದು ಕೇಂದ್ರ ದ ಬಜೆಟ್ ನಲ್ಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಪರಸ್ಪರ ಒಡಕು ಮೂಡಿಸಲು ಬಿಜೆಪಿ ಯತ್ನಿಸುತ್ತಿದೆ. ದಾಳಿಗೊಳಗಾಗುತ್ತೇವೆ ಎಂಬ ಹೆಸರಿನಲ್ಲಿ ಮುಸ್ಲಿಮರು ಬದುಕುತ್ತಿದ್ದಾರೆ. ಹಿಂದು ಮುಸ್ಲಿಮರನ್ನು ಪರಸ್ಪರ ಹೊಡೆದು ಕೊಳ್ಳುವಂತೆ ಮಾಡುವುದು ಬಿಜೆಪಿಯ ಅಜೆಂಡಾ ಆಗಿದೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಉವೈಸಿ ಹೇಳಿದರು. ಮೇ 23ರಿಂದ ಎಂಟು ಮಂದಿ ಗುಂಪು ದಾಳಿಯಿಂದ ಹತ್ಯೆಯಾಗಿದ್ದಾರೆ. ಆದರೆ ಇದು ನಿಲ್ಲುತ್ತಲೂ ಇಲ್ಲ. ಝಾರ್ಖಂಡಿನ ತಬ್ರೀಝ್ ಅನ್ಸಾರಿಯನ್ನು ಹೊಡೆದು ಕೊಂದವರು ಭಾರತದ ಶತ್ರುಗಳು. ಅವರನ್ನು ಪಾಕಿಸ್ತಾನ ಮತ್ತು ಐಸಿಸ್‍ನ ಪ್ರತಿನಿಧಿಗಳಾಗಿ ಪರಿಗಣಿಸಬೇಕೆಂದು ಉವೈಸಿ ಹೇಳಿದರು.












