ರಾಹುಲ್ ಬದಲು ಇನ್ನೊಬ್ಬ ಯುವಕನನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತನ್ನಿ- ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್

0
540

ಹೊಸದಿಲ್ಲಿ, ಜು.6: ರಾಹುಲ್ ಗಾಂಧಿಯ ಬದಲು ಇನ್ನೊಬ್ಬ ಯುವನಾಯಕನಿಗೆ ಕಾಂಗ್ರೆಸ್ ಅಧ್ಯಕ್ಷತೆಯನ್ನು ನೀಡಬೇಕೆಂದು ಪಂಜಾಬ್ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದರು. ಹೊಸ ತಲೆಮಾರಿನ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಬೇಕೆಂದು ಟ್ವಿಟರ್ ಮೂಲಕ ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಯುವಕರ ಪ್ರತಿನಿಧಿ ಆಗಿರಬೇಕು. ಭಾರತದಾದ್ಯಂತ ಪ್ರಭಾವಿಯೂ ಆಗಿರಬೇಕು. ಕೆಳಹಂತದವರೆಗೆ ಹೋಗಿ ಕೆಲಸ ಮಾಡಲು ಶಕ್ತನೂ ಆಗಿರಬೇಕು ಎಂದು ಅಮರೀಂದರ್ ಅಭಿಪ್ರಾಯ ಮಂಡಿಸಿದರು. ರಾಹುಲ್ ಗಾಂಧಿ ರಾಜೀನಾಮೆಯಿಂದ ಅಧ್ಯಕ್ಷ ಗಾದಿ ಖಾಲಿಯಾಗಿದೆ. ಲೋಕಸಭೆಯ ಸೋಲಿನ ಹೊಣೆಹೊತ್ತು ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.