ವಾಷಿಂಗ್ಟನ್, ಜು. 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಶ್ರಿತರ ಕುರಿತು ಹೊಂದಿರುವ ನಿಲುವನ್ನು ಪ್ರಶ್ನಿಸಿ ವಲಸೆ ನೀತಿಯನ್ನು ಪ್ರತಿಭಟಿಸಿ ಅಮೆರಿಕದಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದರು. ಅಮೆರಿಕದಲ್ಲಿ ವಲಸೆಗಾರರನ್ನು ಬಂಧಿಸಿ ಜೈಲಿಗೆ ತಳ್ಳುತ್ತಿರುವ ಸರಕಾರದ ಕ್ರಮವನ್ನು ಮತ್ತು ಕುಟುಂಬವನ್ನು ಪರಸ್ಪರ ದೂರ ಮಾಡುತ್ತಿರುವ ನಿಲುವನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಶುಕ್ರವಾರ ವಾಷಿಂಗ್ಟನ್ ನಲ್ಲಿ ವೈಟ್ ಹೌಸ್ ಸಮೀಪದಲ್ಲಿ ರಾಲಿ ನಡೆದಿದೆ. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ವಲಸೆಗಾರರು ಅನುಭವಿಸುತ್ತಿರುವ ಕಷ್ಟಗಳು, ದುರಂತಗಳು ಇತ್ತೀಚೆಗೆ ಚರ್ಚೆಯಾಗಿದ್ದವು. ನಂತರ ಟ್ರಂಪ್ ವಲಸೆ ನೀತಿಯ ವಿರುದ್ಧ ದೇಶದ ಜನರು ಪ್ರತಿಭಟನೆ ಮತ್ತು ವಿರೋಧವನ್ನು ವ್ಯಕ್ತಪಡಿಸಿ ರಂಗಪ್ರವೇಶಿಸಿದ್ದಾರೆ.
ನಿರಾಶ್ರಿತರ ಶಿಬಿರವನ್ನು ಮುಚ್ಚುವುದು. ಮಕ್ಕಳನ್ನು ಬಿಟ್ಟುಕೊಡುವುದು, ಕುಟುಂಬವನ್ನು ಜೊತೆಗೂಡಿಸುವುದು, ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಎಂದು ಮೇಣದ ಬತ್ತಿ ಮತ್ತು ಪ್ಲಕಾರ್ಡ್ ಹಿಡಿದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದರು.












