ಪಾರ್ಲಿಮೆಂಟಿನಲ್ಲಿ ಪ್ರತಿಭಟನೆಗಳಿಗೆ ನಿಷೇಧ!

0
201

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಪಾರ್ಲಿಮೆಂಟಿನಲ್ಲಿ ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿದೆ. ರಾಜ್ಯಸಭಾ ಸಚಿವಾಲಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಇದಕ್ಕೆ ಸಂಬಂಧಿಸಿದ ಆದೇಶ ಹೊರಡಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿ ಜೈರಾಮ್ ರಮೇಶ್ ರಾಜ್ಯಸಭಾ ಕಾರ್ಯದರ್ಶಿಯವರ ಆದೇಶ ಪ್ರತಿಯನ್ನು ಹಂಚಿಕೊಂಡು ಪ್ರತಿಭಟನೆ ಸಲ್ಲಿಸಿದ್ದಾರೆ.

ಪ್ರತಿಭಟನೆ, ಧರಣಿ, ಮುಷ್ಕರ ಉಪವಾಸ ಸತ್ಯಾಗ್ರಹಕ್ಕೂ ಧಾರ್ಮಿಕ ಕಾರ್ಯಕ್ರಮಗಳಿಗೂ ಸದಸ್ಯರು ಪಾರ್ಲಿಮೆಂಟನ್ನು ಉಪಯೋಗಿಸುವಂತಿಲ್ಲ ಎಂದು ರಾಜ್ಯಸಭಾ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ. ದಯವಿಟ್ಟು ಸದಸ್ಯರು ಆದೇಶವನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ಪಾರ್ಲಿಮೆಂಟಿನಲ್ಲಿ 65 ಪದಗಳನ್ನು ಬಳಸದಂತೆ ಗುರುವಾರದಂದು ಮೋದಿ ಸರಕಾರ ನಿಷೇಧ ಹೇರಿತ್ತು. ಇದು ಮೋದಿ ಸರಕಾರವನ್ನು ಟೀಕಿಸುವುದನ್ನು ತಡೆಯುವುದಕ್ಕೆ ಎಂದು ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.