ಕೊರೋನಾ: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

0
602

ಸನ್ಮಾರ್ಗ ವಾರ್ತೆ

ಡಾ. ಮುಹಮ್ಮದ್ ಕುತುಬುದ್ದೀನ್
ಮನೋವೈದ್ಯರು, ಅಮೇರಿಕಾ

ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾನವಕುಲವು ದೈಹಿಕ ಸಮಸ್ಯೆಗಳೊಂದಿಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ತಂದ ಎರಡನೇ ಪ್ರಮುಖ ಸಮಸ್ಯೆಯು “ಮಾನಸಿಕ ಆರೋಗ್ಯ”ವಾಗಿದೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಜನರು ಮಾನಸಿಕ ಅಸ್ವಸ್ಥತೆ ಮತ್ತು ಆತಂಕದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದಾರೆ ಮತ್ತು ಸಾಮಾಜಿಕ ಅಂತರದ ಕ್ರಮಗಳನ್ನು ಅವರ ಮೇಲೆ ಹೇರಲಾಗಿದೆ.

ಉದ್ಯೋಗ ಕಳೆದುಕೊಳ್ಳುವ ಭಯ, ಹೊರಗೆ ಹೋಗಲೂ ಭಯವು ಆವರಿಸಿದ್ದು, ವೈರಸ್‌ನಿಂದ ಬಳಲುತ್ತಿರುವ ಮತ್ತು ಅದರೊಂದಿಗೆ ಸಾಯುವ ಭಯ ನಮ್ಮೆಲ್ಲರನ್ನೂ ಖಿನ್ನತೆಗೆ ದೂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಹಲವಾರು ಕೊರೋನ ವೈರಸ್ ರೋಗಿಗಳು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ, ಇದು ವಿಪರ್ಯಾಸದ ಸನ್ನಿವೇಶವಾಗಿದೆ.

ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೇ, ಒಂದು ಕಾಯಿಲೆ ಇದ್ದಾಗ, ಗುಣಪಡಿಸುವಿಕೆಯೂ ಇದೆ. ಪ್ರಪಂಚದಾದ್ಯಂತದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡಲು ಸಾಕಷ್ಟು ನಿಸ್ವಾರ್ಥ ಮನೋವೈದ್ಯರು ಮತ್ತು ಮನಶ್ಶಾಸ್ತ್ರಜ್ಞರು ಮುಂದಾಗಿದ್ದಾರೆ. ವೈರಸ್‌ನಿಂದ ಮುಕ್ತಿಪಡೆಯಲು ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗಿನಿಂದ ಅವರು ಜಾಗತಿಕವಾಗಿ ಉಚಿತ ಸೇವೆಗಳನ್ನು ನೀಡುತ್ತಿದ್ದಾರೆ.

ಚಿಕಾಗೊ ಮೂಲದ ಮನೋವೈದ್ಯ ಡಾ. ಮುಹಮ್ಮದ್ ಕುತುಬುದ್ದೀನ್ ಹೇಳುತ್ತಾರೆ, “ಕೊರೋನವೈರಸ್ ಸಾಂಕ್ರಾಮಿಕವು ನಮಗೆ ಹೊಸದಲ್ಲ. ಈ ಪ್ರಪಂಚದಲ್ಲಿ ಜಾಗತಿಕ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ಬಹಳ ಸಮಯದಿಂದ ಸಂಭವಿಸುತ್ತಿವೆ ಮತ್ತು ಕೊರೋನ ವೈರಸ್‌ಗೆ ಮುಂಚಿನ ಹಾಗೂ ಇತ್ತೀಚಿನ ದಿನಗಳಲ್ಲಿಯೂ ಜನರಿಗೆ ಪರಿಚಯದಲ್ಲಿರುವ H1N1 ಅಥವಾ ಸ್ಪಾನಿಷ್ಯ ಫ್ಲ್ಯೂ ಕೂಡ ಇಂತಹುದೇ ಒಂದು ಸಾಂಕ್ರಾಮಿಕ ಖಾಯಿಲೆಯಾಗಿತ್ತು. ಇದು ಸುಮಾರು 500 ಮಿಲಿಯನ್ ಜನರನ್ನು ಬಲಿ ಪಡೆದಿದೆ. ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೆ ಬಲಿಯಾಗಿದ್ದರೆಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಆದ್ದರಿಂದ ಕೊರೋನ ವೈರಸ್ ಸಂದಿಗ್ಧತೆಯಲ್ಲಿ ಭಯಭೀತರಾಗಬಾರದು ಬದಲಿಗೆ ಅದನ್ನು ಎಚ್ಚರಿಕೆಯಿಂದ ಮತ್ತು ಧೈರ್ಯದಿಂದ ನಿಭಾಯಿಸಬೇಕು” ಎಂದು ಅವರು ಹೇಳಿದ್ದಾರೆ.

ಮಾನವ ಮಿದುಳಿನ ಕಾರ್ಯಚಟುವಟಿಕೆಯಲ್ಲಿ ಸಂಭವನೀಯ ಬದಲಾವಣೆಗಳ ಕುರಿತು ಮಾತನಾಡಿದ ಡಾ. ಕುತುಬುದ್ದೀನ್, ಜಾಗತಿಕ ಸಾಂಕ್ರಾಮಿಕ ರೋಗಗಳ ಈ ಸಮಯದಲ್ಲಿ, ಜನರು ಹೆಚ್ಚು ಒತ್ತಡಕ್ಕೊಳಗಾಗುತ್ತಿದ್ದಾರೆ;ಕ್ರಮೇಣ ಈ ಭಯವೇ ರೋಗವಾಗಿ ಮಾರ್ಪಾಡಾಗುತ್ತಿದೆ. ಈ ಸಮಯದಲ್ಲಿ, ಮೆದುಳು ಕಾರ್ಯರೂಪಕ್ಕೆ ಬರುತ್ತದೆ ಮತ್ತು ತುರ್ತು ಸಂದರ್ಭಗಳನ್ನು ನಿಭಾಯಿಸಲು ದೇಹವನ್ನು ಸಮತೋಲನಗೊಳಿಸಲು ಮತ್ತು ಶಾಂತಗೊಳಿಸಲು ಪ್ರಯತ್ನಿಸುತ್ತದೆ. ಆದರೆ, ಹಾರ್ಮೋನುಗಳು ಅತಿಯಾಗಿ ಸ್ರವಿಸಿದರೆ ಮತ್ತು ದೇಹವು ಅಧಿಕ ಬಿಸಿಯಾಗುತ್ತದೆ ಹಾಗೂ ಇದು ಆತಂಕ, ಖಿನ್ನತೆ, ಹತಾಶೆ, ಮನಃಸ್ಥಿತಿ ಅಸ್ವಸ್ಥತೆಗಳು, ನಂತರದ ಆಘಾತಕಾರಿ ಒತ್ತಡದ ಕಾಯಿಲೆ (PTSD) ಇತ್ಯಾದಿಗಳಿಗೆ ಕಾರಣವಾಗುತ್ತದೆ.

ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಡಾ.ಕುತುಬುದ್ದೀನ್ ಕೆಲವು ಸಲಹೆಗಳನ್ನು ನೀಡಿದ್ದಾರೆ. “ವ್ಯಾಯಾಮ, ತಮಾಷೆ ಮಾಡುವುದು, ಮತ್ತು ಮನಸ್ಸನ್ನು ಸಡಿಲಗೊಳಿಸುವ ಮತ್ತು ಖಿನ್ನತೆಯ ಆಲೋಚನೆಗಳಿಂದ ಮುಕ್ತಗೊಳಿಸುವ ಮತ್ತು ಎಲ್ಲಾ ರೀತಿಯ ನಕಾರಾತ್ಮಕತೆಯನ್ನು ತೊಡೆದು ಹಾಕುವಂತಹ ಆಟಗಳನ್ನು ಆಡುವುದು,ಹಾಗೂ ಎಲ್ಲಾ ಚಟುವಟಿಕೆಗಳನ್ನು ಒಬ್ಬರು ಪಟ್ಟಿ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಋಣಾತ್ಮಕ ವಿಷಯದಿಂದ ದೂರವಿರಲು ಪ್ರಯತ್ನಿಸಬೇಕಲ್ಲದೇ ಸ್ನೇಹಿತರು, ಕುಟುಂಬ ಮತ್ತು ಎಲ್ಲಾ ಸಕಾರಾತ್ಮಕ ಜನರೊಂದಿಗೆ ಸಂಪರ್ಕದಲ್ಲಿರಲು” ಅವರು ಜನರಿಗೆ ಸಲಹೆ ನೀಡಿದ್ದಾರೆ.

ಒಬ್ಬರು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದರಿಂದ ದೂರವಿರಬೇಕು ಹಾಗೂ ಸಂತೋಷವಾಗಿರಲು ಪ್ರಯತ್ನಿಸಬೇಕು. ಯಾಕೆಂದರೆ ಜೀವನದಲ್ಲಿ “ಸಂತೋಷವೇ ಮುಖ್ಯ”. ಈ ಸಾಂಕ್ರಾಮಿಕ ರೋಗವನ್ನು ದಾಟಲು ಜನರು ಎಲ್ಲಾ ರೀತಿಯ ಒತ್ತಡ ನಕಾರಾತ್ಮಕತೆಯಿಂದ ಮುಕ್ತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಾನವನ ಮೆದುಳಿನ ಕುರಿತು ಅಧ್ಯಯನ ನಡೆಸಿದ ಪ್ರಖ್ಯಾತ ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.

ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಲಾಕ್‌ಡೌನ್ ಅವಧಿಯಲ್ಲಿ ಯುವಕರು ತಮ್ಮ ಪ್ರಾಣವನ್ನು ತ್ಯಜಿಸುತ್ತಿರುವ ಇಂತಹ ಸನ್ನಿವೇಶದ ಮಧ್ಯೆ, ನಾವು ನಮ್ಮ ಪ್ರೀತಿ ಪಾತ್ರರನ್ನು ಗಮನಿಸುತ್ತಲೂ ಅವರೊಂದಿಗೆ ಬೆರೆಯುತ್ತಲೂ ಇರಬೇಕು ಎನ್ನುತ್ತಾರೆ. ಸಕಾರಾತ್ಮಕತೆ ಮತ್ತು ಪ್ರಜ್ಞೆ ಮಾತ್ರವೇ ವೈರಸ್ ಫೋಬಿಯಾದಿಂದ ಬದುಕುವ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಡಾ. ಮುಹಮ್ಮದ್ ಕುತುಬುದ್ದೀನ್
ಮನೋವೈದ್ಯರು, ಅಮೇರಿಕಾ

ನಿರೂಪಣೆ: ಉನ್ಸಾ ಖಾನ್

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.