ಕೊರೋನಾ ವೈರಸ್ ವಿರುದ್ಧ ಹೋರಾಡಲು ಗೋ-ಮೂತ್ರ ಸೇವಿಸಿ: ಬಿಜೆಪಿ ನಾಯಕ ದಿಲೀಪ್ ಘೋಷ್

0
750

ಸನ್ಮಾರ್ಗ ‌ವಾರ್ತೆ

ಕೋಲ್ಕತಾ,ಜು.19: ಅವೈಜ್ಞಾನಿಕ ಮನೋಧರ್ಮಕ್ಕೆ ಹೆಸರು ವಾಸಿಯಾಗಿರುವ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, “COVID-19 ವಿರುದ್ಧದ ಹೋರಾಟದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು “ಗೋ-ಮೂತ್ರ” ವನ್ನು ಬಳಸಬೇಕೆಂದು” ಹೇಳಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದ ಒಂದು ವಿಡಿಯೋ ಕಾಣಿಸಿಕೊಂಡಂತೆ ಘೋಷ್‌ರವರು ಮನೆಮದ್ದುಗಳ ಮಹತ್ವವನ್ನು ಒತ್ತಿ ಹೇಳುತ್ತಾ, “ಜನರು ಆರೋಗ್ಯವಾಗಿರಲು ಗೋ ಮೂತ್ರವನ್ನು ಸೇವಿಸಬೇಕಾಗಿದೆ” ಎಂದು ಹೇಳಿದ್ದಾರೆ. ಗುರುವಾರ ದುರ್ಗಾಪುರದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ.

“ನಾನು ಹಸುಗಳ ಬಗ್ಗೆ ಮಾತನಾಡಿದರೆ, ಅನೇಕರು ಅನಾನುಕೂಲತೆಯನ್ನು ಅನುಭವಿಸುತ್ತಾರೆ. ಹಸುವಿನ ಮೌಲ್ಯವನ್ನು ಕತ್ತೆಗಳು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ. ಇದು ಭಾರತ, ಶ್ರೀಕೃಷ್ಣನ ಭೂಮಿ ಮತ್ತು ಇಲ್ಲಿ ನಾವು ಹಸುಗಳನ್ನು ಪೂಜಿಸುತ್ತೇವೆ. ನಾವು ಆರೋಗ್ಯವಾಗಿರಲು ಹಸುವಿನ ಮೂತ್ರವನ್ನು ಸೇವಿಸುತ್ತೇವೆ. ಆಲ್ಕೊಹಾಲ್ ಸೇವಿಸುವವರು, ಹಸುವಿನ ಮೌಲ್ಯವನ್ನು ನೀವು ಹೇಗೆ ಅರ್ಥಮಾಡಿಕೊಳ್ಳುವಿರಿ” ಎಂದು ಶ್ರೀ ಘೋಷ್ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.

ನವೆಂಬರ್ 2019 ರಲ್ಲಿ ಅವರು ಭಾರತೀಯ ಹಸುವಿನ ಹಾಲಿನಲ್ಲಿ ಚಿನ್ನವಿದೆ ಎಂದು ಹೇಳುವ ಮೂಲಕ ಘೋಷ್ ವಿವಾದಕ್ಕೀಡಾಗಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.