ಹಜ್ ಯಾತ್ರೆಗೆ ಕೆಲವೇ ತಿಂಗಳು ಬಾಕಿ: ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಿಸಲು ಮುಂದಾಗದ ಕೇಂದ್ರ ಸರಕಾರ

0
208

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹಜ್ ಯಾತ್ರೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಕೇಂದ್ರ ಸರಕಾರ ಈ ಯಾತ್ರೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ಪ್ರಾರಂಭಿಸದಿರುವುದು ಸಾರ್ವಜನಿಕರಲ್ಲಿ ಪ್ರಶ್ನಾತೀತವಾಗಿ ಉಳಿದಿದೆ. ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಹಜ್ ಯಾತ್ರೆಗೆ ಸಂಬಂಧಿಸಿ ಕೇಂದ್ರ ಸರಕಾರ ಮೊದಲು ತನ್ನ ಹಜ್ ನೀತಿಯನ್ನು ಪೂರ್ತಿಗೊಳಿಸಿರಬೇಕಾಗುತ್ತದೆ. ಆ ಬಳಿಕ ಅಪೇಕ್ಷಿತರ ನೋಂದಣಿ ಪ್ರಾರಂಭಿಸಬೇಕಾಗುತ್ತದೆ.

ಹಜ್ ಯಾತ್ರೆ ಕೈಗೊಳ್ಳ ಬಯಸುವವರ ನೋಂದಣಿ ಚಟುವಟಿಕೆಯು ನವಂಬರ್ ತಿಂಗಳಲ್ಲಿ ಆರಂಭವಾಗಬೇಕಿತ್ತು ಆದರೆ ಜನವರಿ ಒಂದರಂದು ಇದನ್ನು ಆರಂಭಿಸಲಾಗುವುದು ಎಂದು ಕೇಂದ್ರ ಹಜ್ ಕಮಿಟಿಯ ಚೇರ್ಮನ್ ಹೇಳಿದ್ದರು. ಆದರೆ ಜನವರಿ ಐದರ ಬಳಿಕವೂ ಇನ್ನೂ ಅದು ಆರಂಭವಾಗಿಲ್ಲ. ಲಕ್ಷಾಂತರ ಹಜ್ ಯಾತ್ರಿಕರ ಬಗ್ಗೆ ಕೇಂದ್ರ ಸರಕಾರ ಅತ್ಯಂತ ನಿರ್ಲಜ್ಜವಾಗಿ ವರ್ತಿಸುತ್ತಿದೆ ಎಂದು ಸಾರ್ವಜನಿಕವಾಗಿ ಆರೋಪ ವ್ಯಕ್ತವಾಗುತ್ತಿದೆ. ಹಜ್ ಯಾತ್ರೆಗೆ ಸಂಬಂಧಿಸಿ ಕೇಂದ್ರ ಸರಕಾರ ನಿರ್ಲಕ್ಷ ಧೋರಣೆ ತಾಳಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.