ಸನ್ಮಾರ್ಗ ವಾರ್ತೆ
ವಾಸ್ಕೋ: ಜಮಾಅತೆ ಇಸ್ಲಾಮೀ ಹಿಂದ್, ವಾಸ್ಕೋ ಗೋವಾ ಘಟಕದ ವತಿಯಿಂದ “ಧರ್ಮಗ್ರಂಥಗಳ ಪ್ರಕಾರ ಜೀವನದ ಉದ್ದೇಶ” ಎಂಬ ವಿಷಯದಲ್ಲಿ ನವೆಂಬರ್ 22ರ ಭಾನುವಾರ ಸಂಜೆ 7ರಿಂದ 8:30ರ ವರೆಗೆ ಜುವಾರಿನಗರದ ಹಳೆಯ ಪೆಟ್ರೋಲ್ ಪಂಪ್ ಸಮೀಪದ ಸೈಕ್ಲೋನ್ ಶೆಲ್ಟರ್ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾನವ ಜೀವನದ ಉದ್ದೇಶವೇನು? ಮನುಷ್ಯನ ಬದುಕಿನ ನಿಜವಾದ ಗುರಿ ಮತ್ತು ಕರ್ತವ್ಯಗಳೇನು? ಮಾನವೀಯತೆ, ಪ್ರೀತಿ, ನ್ಯಾಯ, ಶಾಂತಿ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ಎಂಬ ಮಹತ್ವದ ವಿಚಾರಗಳನ್ನು ದೈವಿಕ ಧರ್ಮಗ್ರಂಥಗಳಾದ ಕುರ್ಆನ್, ಬೈಬಲ್ ಮತ್ತು ವೇದಗಳ ಬೋಧನೆಗಳು ಹಾಗೂ ಸಂದೇಶಗಳ ಹಿನ್ನೆಲೆಯಲ್ಲಿ ವಿವಿಧ ಧರ್ಮಗಳ ಜ್ಞಾನ ಮತ್ತು ಮೌಲ್ಯಗಳನ್ನು ಪರಸ್ಪರ ಅರಿತುಕೊಳ್ಳುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಹೋದರತೆ ಮತ್ತು ಮಾನವೀಯ ಸಂಬಂಧಗಳನ್ನು ಬಲಪಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಜಮಾಅತೇ ಇಸ್ಲಾಮಿ ಗೋವಾ ರಾಜ್ಯಾಧ್ಯಕ್ಷರಾದ ಜನಾಬ್ ಆಸಿಫ್ ಹುಸೈನ್ ಗೌರವಾನ್ವಿತ ಅತಿಥಿಗಳಾಗಿ ಸೇವಾಲಾಲ್ ಸಮಿತಿ ಮತ್ತು ಅಖಿಲ ಗೋವಾ ಬಂಜಾರ ಸಮುದಾಯದ ಅಧ್ಯಕ್ಷರಾದ ಶ್ರೀ ಗೋವಿಂದ್ ರಾಥೋಡ್, ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಬಸವರಾಜ್ ಗೌಡರ್, ಆರಿಶ್ ಖಾದರ್ ಮಾಜಿ ಸದಸ್ಯರು, ಸಾಂಕ್ವಾಲ್ ಪಂಚಾಯತ್ ಮತ್ತು ಸಮಾಜ ಸೇವಕರು, ವಜೀರ್ ಖಾನ್ ಅಧ್ಯಕ್ಷರು, ಮಿನಾರ್ ಮಸೀದಿ ಬಿರ್ಲಾ ಗೋವಾ, ರಾಜ್ಯ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ರುದ್ರಯ್ಯ ಹಿರೇಮಠ, ಕನ್ನಡ ಸಂಘ ವಾಸ್ಕೋದ ಅಧ್ಯಕ್ಷರಾದ ಶ್ರೀ ಬಿ. ಆರ್. ಜಗ್ಗಲ್, ಯಲ್ಲಾಲಿಂಗೇಶ್ವರ ಮಠ ಜುವಾರಿನಗರದ ಪೂಜಾರಿಗಳಾದ ಶ್ರೀ ಕಂಬಳಯ್ಯ, ಬಿರ್ಲಾ ಮಂದಿರದ ಪೂಜಾರಿಗಳಾದ ಶ್ರೀ ಎಸ್. ವಿ. ಕುಲಕರ್ಣಿ ಹಾಗೂ ಜೈ ಭೀಮ್ ಸಮಿತಿ ಜುವಾರಿನಗರದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಯಲ್ಲಪ್ಪ ಉಪಸ್ಥಿತರಿರಲಿದ್ದಾರೆ.
ಧರ್ಮ, ಜಾತಿ, ಭಾಷೆ ಮತ್ತು ಪಂಥಗಳ ಭೇದಗಳನ್ನು ಮೀರಿ ಮಾನವೀಯ ಮೌಲ್ಯಗಳು, ಪರಸ್ಪರ ಗೌರವ, ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್, ವಾಸ್ಕೋ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.












