ಸನ್ಮಾರ್ಗ ವಾರ್ತೆ
✍️ ಇಷಲ್
ಇನ್ನು ಮುಂದೆ ಖತರ್ ನಿಂದ ಎಕ್ಸಿಟ್ ಆಗ ಬಯಸುವವರು ಮತ್ತು ಕತರ್ ಗೆ ಎಂಟ್ರಿ ಆಗಬಯಸುವವರು ಕಂಭ ಕಂಭ ಸುತ್ತಬೇಕಾಗಿಲ್ಲ. ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಬೇಕಾಗಿಲ್ಲ. ಮೊಬೈಲ್ ನಲ್ಲಿ ಮಾಡುವ ಒಂದು ಕ್ಲಿಕ್ ನಿಮಗೆ ಈ ಎಲ್ಲವನ್ನ ಕ್ಷಣಮಾತ್ರದಲ್ಲಿ ಸುಲಭಗೊಳಿಸುತ್ತದೆ.
ಕತರ್ ಗೃಹ ಸಚಿವಾಲಯವು ಇದೀಗ ಖತರ್ ಡಿಜಿಟಲ್ ಐಡೆಂಟಿಟಿ ಸ್ಮಾರ್ಟ್ ಆಪ್ಲಿಕೇಶನ್ ಆಪ್ ಅನ್ನ ಬಿಡುಗಡೆ ಮಾಡಿದೆ. ಇದನ್ನ ಬಳಸಿ ಕತರ್ ನಿಂದ ಹೊರಹೋಗುವುದು ಮತ್ತು ಕತರ್ ಪ್ರವೇಶಿಸುವುದು ಬಹಳ ಸುಲಭವಾಗಲಿದೆ. ಡಿಜಿಟಲ್ ವಾಲಿಡ್ ಅಪ್ಲಿಕೇಶನ್ ಸರ್ವಿಸ್ ಆಗಿರುವ ಕ್ಯೂ ಡಿಐಯಲ್ಲಿ ಪಾಸ್ಪೋರ್ಟ್, ಐಡಿ ಇತ್ಯಾದಿಗಳನ್ನು ಉಪಯೋಗಿಸಿ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇ ಗೇಟ್ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಬಹುದಾಗಿದೆ.
ಇದಕ್ಕಾಗಿ ಮೊದಲು ನೀವು ಮಾಡಬೇಕಾದದ್ದು ಏನೆಂದರೆ ಆಪ್ ಸ್ಟೋರ್ ನಿಂದ ಕತಾರ್ ಡಿಜಿಟಲ್ ಐಡೆಂಟಿಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ಆ ಬಳಿಕ ಲಾಗಿನ್ ಆಗ್ಬೇಕು. ಆ ಬಳಿಕ ಟ್ರಾವೆಲ್ ಡಾಕ್ಯುಮೆಂಟರಿಯನ್ನು ಆಯ್ಕೆ ಮಾಡಿ ಮೇಲಿರುವ ಐಕಾನ್ ಸ್ಪರ್ಶಿಸಿ ಮುಖವನ್ನ ಗುರುತು ಹಚ್ಚುವ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಬಳಿಕ ಕ್ಯಾಮರಾ ಸ್ಕ್ಯಾನರ್ ನೊಂದಿಗೆ ಸೇರಿಸಿ ಹಿಡಿದು ನಿಮ್ಮ ಐಡೆಂಟಿಟಿಯನ್ನು ಸ್ಪಷ್ಟ ಪಡಿಸಬೇಕು. ಹೀಗೆ ಮಾಡಿದ ತಕ್ಷಣ ಗೇಟ್ ತೆರೆದುಕೊಳ್ಳುತ್ತದೆ.
ಕತರ್ ಗೆ ಪ್ರವೇಶಿಸುವಾಗ ಮತ್ತು ಕಥರ್ ನಿಂದ ಹೊರಡುವಾಗ ಒರಿಜಿನಲ್ ದಾಖಲೆಗಳನ್ನು ಪರಿಶೀಲಿಸದೆಯೇ ಪ್ರಯಾಣ ಪ್ರಕ್ರಿಯೆ ಸುಲಭಗೊಳಿಸುವ ವಿಧಾನ ಇದು. ಬಯೋಮೆಟ್ರಿಕ್ ಮೂಲಕ ಲಾಗಿನ್ ಮಾಡಬಹುದಾದ ಸುರಕ್ಷಿತ ವಿಧಾನವೇ ಈ ಕ್ಯೂಡಿಐ. ಆದರೆ ಪಾಸ್ಪೋರ್ಟ್ ಐಡಿ, ನ್ಯಾಷನಲ್ ಅಡ್ರೆಸ್, ಡ್ರೈವಿಂಗ್ ಲೈಸೆನ್ಸ್, ಸಂಸ್ಥೆಯ ರಿಜಿಸ್ಟ್ರೇಷನ್ ಕಾರ್ಡ್ ಇತ್ಯಾದಿ ಅಧಿಕೃತ ದಾಖಲೆಗಳ ಡಿಜಿಟಲ್ ಪ್ರತಿಯನ್ನ ನಿಮ್ಮ ಮೊಬೈಲ್ ನಲ್ಲಿ ಮರೆಯದೇ ಇಟ್ಟು ಕೊಳ್ಳಬೇಕಾಗಿದೆ.
ಆದ್ದರಿಂದ ಕಥರ್ ಡಿಜಿಟಲ್ ಐಡೆಂಟಿಟಿ ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಈ ಮೇಲೆ ಹೇಳಿದ ಪ್ರಕ್ರಿಯೆಗಳೊಂದಿಗೆ ಸುಲಭವಾಗಿಯೇ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುವುದಕ್ಕೆ ಮತ್ತು ನಿಲ್ದಾಣದಿಂದ ಹೊರ ಹೋಗುವುದಕ್ಕೆ ಸಾಧ್ಯವಾಗಲಿದೆ.












