ದೇಶ ಒಗ್ಗಟ್ಟಿನಲ್ಲಿರುವಾಗ ರಾಹುಲ್‍ ಗಾಂಧಿ ನೀಚ ರಾಜಕೀಯ ಮಾಡುತ್ತಿದ್ದಾರೆ: ರಾಹುಲ್ ವಿರುದ್ಧ ಮಾತನಾಡಿದ ಯೋಧನ ತಂದೆ ವಿಡಿಯೋ ಟ್ವೀಟ್ ಮಾಡಿ ಅಮಿತ್ ಶಾ ಟೀಕೆ

0
960

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.20: ಭಾರತದ ಗಡಿಯಲ್ಲಿ ಚೀನಾದ ದಾಳಿಯನ್ನು ಮುಂದಿಟ್ಟು ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿಯನ್ನು ಗೃಹ ಸಚಿವ ಅಮಿತ್ ಶಾ ತೀಕ್ಷಣವಾಗಿ ಟೀಕಿಸಿದ್ದಾರೆ. ದೇಶ ಒಗ್ಗಟ್ಟಿನಲ್ಲಿರುವ ಸಮಯದಲ್ಲಿ ರಾಹುಲ್ ಗಾಂಧಿ ಕೆಟ್ಟ ರಾಜಕೀಯ ಬಿಟ್ಟು ರಾಷ್ಟ್ರದ ಹಿತಾಸಕ್ತಿಗೆ ಬೆಂಬಲ ಸೂಚಿಸಬೇಕೆಂದು ಅಮಿತ್ ಶಾ ಟ್ವೀಟ್ ಮಾಡಿದರು.

ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕನ ತಂದೆ ರಾಹುಲ್ ಗಾಂಧಿಯ ವಿರುದ್ಧ ಮಾತಾಡುತ್ತಿರುವ ವಿಡಿಯೋ ಟ್ವೀಟ್ ಮಾಡಿ ಅಮಿತ್ ಶಾ ರಾಹುಲ್‍ರನ್ನು ಟೀಕಿಸಿದ್ದಾರೆ. ಒಬ್ಬ ಧೀರ ಯೋಧನ ತಂದೆ ಮಾತಾಡುತ್ತಿದ್ದಾರೆ ಮತ್ತು ರಾಹುಲ್‍ಗೆ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಅಮಿತ್ ಶಾ ವಿಡಿಯೋದ ಕೆಳಗೆ ಬರೆದಿದ್ದಾರೆ. ಭಾರತದ ಸೈನ್ಯ ಬಲಶಾಲಿಯಾಗಿದೆ. ರಾಹುಲ್ ಇದರಲ್ಲಿ ರಾಜಕೀಯ ಮಿಶ್ರಣ ಮಾಡಬಾರದೆಂದು ಸೈನಿಕನ ತಂದೆ ವೀಡಿಯೊದಲ್ಲಿ ಹೇಳುತ್ತಿದ್ದಾರೆ.

ಚೀನಾದ ದಾಳಿಯ ವಿರುದ್ಧ ಕೇಂದ್ರ ಸರಕಾರವನ್ನು ರಾಹುಲ್ ಗಾಂಧಿ ತೀಕ್ಷ್ಣವಾಗಿ ಟೀಕಿಸಿದ್ದರು. ಪ್ರಧಾನಿ ನಮ್ಮ ಭೂಮಿಯನ್ನು ಚೀನಾದ ವಶಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಭೂಮಿ ಚೀನಾದ್ದಾಗಿದ್ದರೆ ನಮ್ಮ ಸೈನಿಕರು ಹೇಗೆ ಮೃತಪಟ್ಟಿದ್ದಾರೆ. ಎಲ್ಲಿ ಮೃತಪಟ್ಟಿದ್ದಾರೆ ಎಂದು ರಾಹುಲ್ ಪ್ರಧಾನಿಯನ್ನು ಪ್ರಶ್ನಿಸಿದ್ದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.