ಚೀನಾದ ಆಕ್ರಮಣ ಖಂಡನೀಯ: ಕೇಂದ್ರ ಸರಕಾರ ಪ್ರಬುದ್ಧ ಮತ್ತು ದೃಢವಾದ ತೀರ್ಮಾನವನ್ನು ಕೈಗೊಳ್ಳಲಿ- ಜಮಾಅತೆ ಇಸ್ಲಾಮೀ ಹಿಂದ್

0
768

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.20: ಲಡಾಖ್‌ನಲ್ಲಾದ ಚೀನಾದ ಆಕ್ರಮಣವನ್ನು ಜಮಾಅತೆ ಇಸ್ಲಾಮೀ ಹಿಂದ್ (ಜೆಐಹೆಚ್) ಖಂಡಿಸಿದ್ದು, ಜೆಐಹೆಚ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿಯವರು, ಚೀನಾದ ವಿರುದ್ಧ ಕೇಂದ್ರ ಸರಕಾರವು ಪ್ರಬುದ್ಧ ಮತ್ತು ದೃಢನಿಶ್ಚಯದ ನಿರ್ಧಾರವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ‌.

ಲಡಾಖ್‌‌ನ ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರ ಮೇಲಾದ ಅಪ್ರಚೋದಿತ ಚೀನಾದ ದಾಳಿಯನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮ ಗಡಿಗಳನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ಕೆಚ್ಚೆದೆಯ ಸೈನಿಕರ ಕುಟುಂಬಗಳಿಗೆ ನಮ್ಮ ಸಂತಾಪವನ್ನು ಸಲ್ಲಿಸುತ್ತೇವೆ. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುವುದರಿಂದ, ಭಾರತ ಸರ್ಕಾರವು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು ಮತ್ತು ಪರಿಸ್ಥಿತಿಯ ಬಗ್ಗೆ ದೃಢವಾದ ನಿರ್ಧಾರವನ್ನು ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

“ನಾವು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಒಡೆಯುವ ತಂತ್ರಗಳಿಗೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಬಾರದು ಮತ್ತು ಚೀನಾವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ಮರುವಶಕ್ಕೆ ಪಡೆಯಬೇಕು. ಗಲ್ವಾನ್ ಕಣಿವೆ ಪ್ರದೇಶವು ದೇಶದ ಒಳಗೆ ಒಳನುಗ್ಗುವಿಕೆಯಿಂದ ತಡೆಯಲು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಮಿಲಿಟರಿ ತಜ್ಞರು ಗಮನಸೆಳೆದಿದ್ದಾರೆ. ಉಪ ವಲಯದ ಉತ್ತರದಲ್ಲಿರುವ ನಮ್ಮ ಸೈನಿಕರಿಗೆ ಜೀವಸೆಲೆ ಒದಗಿಸುವ ರಸ್ತೆ ಕಾರ್ಯವನ್ನು ಅಡ್ಡಿಗಳು ಬಾರದಂತೆ ತಡೆಯಬೇಕಾದ ಅಗತ್ಯತೆ ಇದೆ. ಸರಕಾರವು ಎಲ್ಲಾ ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಜನರು, ಪ್ರತಿಪಕ್ಷಗಳು ಮತ್ತು ಮಿಲಿಟರಿ ಮತ್ತು ರಾಜತಾಂತ್ರಿಕ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ತ್ವರಿತವಾಗಿ ಪುನಃಸ್ಥಾಪಿಸಲು ಸರ್ಕಾರ ಮುಂದಾಗಬೇಕಿದೆ. ಈ ಸಮಸ್ಯೆಗೆ ನಮಗೆ ಶಾಂತಿಯುತ, ನ್ಯಾಯಸಮ್ಮತವಾದ ಮತ್ತು ಶಾಶ್ವತ ಪರಿಹಾರ ಬೇಕಿದೆ. ಇದರಿಂದಾಗಿ ನಮ್ಮ ಆರ್ಥಿಕತೆಯನ್ನು ಸರಿಪಡಿಸುವ ಮತ್ತು ಹರಡಿರುವ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರ್ಯವನ್ನು ನಾವು ಕೇಂದ್ರೀಕರಿಸಬಹುದು ಎಂದು ಅವರು ತಿಳಿಸಿದರು‌.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.