ಪ್ರಧಾನಿ ಮೋದಿ ಆಡಳಿತದಲ್ಲಿ ಆರ್ಥಿಕತೆ ನಾಶ; ನಿರುದ್ಯೋಗ ಸಮಸ್ಯೆಯ ಕುರಿತು ರಾಹುಲ್ ಗಾಂಧಿ ಟ್ವೀಟ್

0
509

ಸನ್ಮಾರ್ಗ ವಾರ್ತೆ

ನವದೆಹಲಿ,ಆ.19: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೊಮ್ಮೆ ಟೀಕಿಸಿದ್ದು, ಮೋದಿ ಸರಕಾರದ ತಪ್ಪು ನೀತಿಗಳಿಂದಾಗಿ, ಕಳೆದ ನಾಲ್ಕು ತಿಂಗಳಲ್ಲಿ ಎರಡು ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು, ಇದರಿಂದಾಗಿ ಕುಟುಂಬಗಳ ಮುಂದೆ ಗಂಭೀರ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಎರಡು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದಾರೆ. ಎರಡು ಕೋಟಿ ಕುಟುಂಬಗಳ ಭವಿಷ್ಯ ಕತ್ತಲೆಯಲ್ಲಿದೆ. ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹರಡುವ ಮೂಲಕ, ನಿರುದ್ಯೋಗ ಮತ್ತು ಆರ್ಥಿಕತೆಯು ಸರ್ವನಾಶವಾಗಿರುವ ಸತ್ಯವನ್ನು ದೇಶದಿಂದ ಮರೆಮಾಚಲು ಸಾಧ್ಯವಿಲ್ಲ ಎಂದು ಅವರು ಕುಟುಕಿದ್ದಾರೆ.

ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಈ ನಿಟ್ಟಿನಲ್ಲಿ ವಿವರವಾದ ಅಂಕಿಅಂಶಗಳನ್ನು ನೀಡಿದ್ದು, ಈಗ ಸತ್ಯ ತಿಳಿದು ಬಂದಿದೆ.

2020ರ ಏಪ್ರೀಲ್-ಜುಲೈ ಅವಧಿಯಲ್ಲಿ 1,90,00,000 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜುಲೈ ತಿಂಗಳೊಂದರಲ್ಲಿಯೇ 50,00,000 ಜನರು ಉದ್ಯೋಗ ಕಳೆದು ಕೊಂಡಿದ್ದಾರೆ. ಕೃಷಿ ಮತ್ತು ನಿರ್ಮಾಣದಲ್ಲಿ 41,00,000 ಉದ್ಯೋಗಗಳು ಕಳೆದು ಹೋಗಿವೆ. ಒಟ್ಟು 14,00,00,000ವಜನರಿಗೆ ಉದ್ಯೋಗ ನಷ್ಟವಾಗಿವೆ. ಬಿಜೆಪಿ ದೇಶದ ಜೀವೋಪಾಯದ ಮೇಲೆಯೂ ಸಂಕಷ್ಟ ಸೃಷ್ಟಿಸಿದೆ ಎಂದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.