ಸನ್ಮಾರ್ಗ ವಾರ್ತೆ
ಅಬುಧಾಬಿ, ಸೆ. 29: ಯುಎಇ, ಇಸ್ರೇಲ್ ನಡುವಿನ ರಾಜತಾಂತ್ರಿಕ ಒಪ್ಪಂದವು ಫೆಲಸ್ತೀನಿಯಲ್ಲಿ ಸಂತಸ ಮೂಡಿಸಿದೆ ಎಂದು ಅಮೆರಿಕದ ಯುಎಇ ರಾಯಭಾರಿ ಯೂಸುಫ್ ಅಲ್ ಉತೈಬ ಹೇಳಿದರು. ಅತಿಕ್ರಮಿತ ವೆಸ್ಟ್ ಬ್ಯಾಂಕನ್ನು ವಶಪಡಿಸದಂತೆ ಒಪ್ಪಂದ ತಡೆಯುವುದು. ಆದ್ದರಿಂದ ಫೆಲಸ್ತೀನಿಯರಿಗೆ ಯುಎಇಯೊಂದಿಗೆ ಕೃತಜ್ಞತೆ ಇದೆ ಎಂದು ಅವರು ಹೇಳಿದರು. ಇಸ್ರೇಲಿನ ಮಾಜಿ ಅಮೆರಿಕ ರಾಯಭಾರಿ ದಾನ್ ಶಿಪಿರೊ ಸಹಿತ ಹಲವು ಹಿರಿಯ ಅಧಿಕಾರಿಗಳು ಈ ಒಪ್ಪಂದದ ಹಿಂದಿದ್ದಾರೆ ಎಂದು ಉತೈಬ ಹೇಳಿದರು. ಫೆಲಸ್ತೀನಿನ ಜನರನ್ನು ಉತೈಬ ಆಕ್ಷೇಪಿಸಿದ್ಧಾರೆ. ಅವರು ಕೃತಘ್ನರೆಂದು ಹೇಳಿದ್ದಾರೆ ಎಂದು ಇಸ್ರೇಲಿನ ದಿನಪತ್ರಿಕೆ ಮಾರಿವ್ ವರದಿ ಮಾಡಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಫೆಲಸ್ತೀನಿಯರಿಗೆ ವಂಚನೆ ಅನಿಸುವುದು ವಿರೋಧಾಭಾಸಕರ. ಇದೇ ವೇಳೆ ಅವರು ತೃಪ್ತಿ ಹೊಂದಬೇಕಾಗಿದೆ. ಕಾರಣ ಇದು ವೆಸ್ಟ್ ಬ್ಯಾಂಕನ್ನು ಇಸ್ರೇಲಿಗೆ ಸೇರಿಸುವುದನ್ನು ತಡೆಹಿಡಿದಿದೆ ಎಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಉತೈಬ ಹೇಳಿದರು. ಫೆಲಸ್ತೀನಿನ ಭೂಮಿ ವಶಪಡಿಸುವುದನ್ನು ತಡೆಯುವುದಕ್ಕೆ ಈ ದ್ವಿರಾಷ್ಟ್ರ ಒಪ್ಪಂದ ಎಂದು ಉತೈಬ ಹೇಳಿದ್ದಾರೆ. ಆದರೆ ಅತಿಕ್ರಮಣ, ವಶಪಡಿಸುವಿಕೆ ಮುಂದುವರಿಯಲಿದೆ ಎಂದು ಅಮೆರಿಕ, ಇಸ್ರೇಲ್ ಹೇಳುತ್ತಿವೆ.
ಓದುಗರೇ, ಸನ್ಮಾರ್ಗ fecebook ಪೇಜ್ ಅನ್ನು ಲೈಕ್ ಮಾಡಿ ಬೆಂಬಲಿಸಿ. ವೀಡಿಯೊ












