ಸೌದಿ, ಕತಾರ್ ಸಹಿತ ಆರು ದೇಶಗಳಿಗೆ ಸಂಪರ್ಕ ಕೊಡುವ ರೈಲ್ವೆ ಯೋಜನೆಗೆ ಸಹಿ

0
23

ಸನ್ಮಾರ್ಗ ವಾರ್ತೆ

ಜಿಸಿಸಿ ಯ ಆರು ದೇಶಗಳನ್ನು ಸಂಪರ್ಕಿಸುವ 2117km ಉದ್ದದ ರೈಲ್ವೆ ಯೋಜನೆ ಸಿದ್ಧವಾಗುತ್ತಿದೆ. ಸೌದಿ ಅರೇಬಿಯಾ ಕತಾರ್ ಬಹರೇನ್ ಮತ್ತು ಯುಎಇ ಮೂಲಕ ಹಾದು ಹೋಗುವ ಈ ರೈಲ್ವೆ ಟ್ರ್ಯಾಕ್ ಒಮನ್ ತಲುಪುತ್ತದೆ. ವ್ಯಾಪಾರ ವಹಿವಾಟನ್ನು ಸರಳಗೊಳಿಸುವುದು ಹಾಗೂ ವೆಚ್ಚವನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಲಾಜಿಸ್ಟಿಕ್ಸ್ ವಲಯದಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ಈ ಯೋಜನೆಯ ಮೂಲಕ ತರುವ ಉದ್ದೇಶವನ್ನು ಹೊಂದಲಾಗಿದೆ.

ಗಲ್ಫ್ ರಾಷ್ಟ್ರಗಳ ನಡುವೆ ಸಾರಿಗೆ ಮತ್ತು ವ್ಯಾಪಾರ ಸಂಬಂಧಗಳಲ್ಲಿ ಈ ಯೋಜನೆಯನ್ನು ನಿರ್ಣಾಯಕ ಎಂದು ಹೇಳಲಾಗಿದೆ. ಬಹರೇನ್ ನಲ್ಲಿ ನಡೆದ ಜಿಸಿಸಿ ಸಾರಿಗೆ ಸಚಿವರ 30ನೇ ಸಾಮಾನ್ಯ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.