ಸನ್ಮಾರ್ಗ ವಾರ್ತೆ
ರಾಮಮಂದಿರದಲ್ಲಿ ಭಕ್ತರು ದಾನ ಮಾಡಿದ ಹಣ ಮತ್ತು ಉಡುಗೊರೆಗಳನ್ನು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿ ಎಚ್ ಪಿ ಉಪಾಧ್ಯಕ್ಷ ಮತ್ತು ದೇವಾಲಯದ ಟ್ರಸ್ಟ್ ನ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಪ್ರಶ್ನಿಸಲಾಗಿದೆ. ವಾರದ ಹಿಂದಷ್ಟೇ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಂಪತ್ ರಾಯ್ ಅವರನ್ನು ವಿಶೇಷ ತಂಡವು ಪ್ರಶ್ನಿದೆ.
ದೇವಾಲಯದ ಟ್ರಸ್ಟಿಯಾಗಿದ್ದ ಅನಿಲ್ ಮಿಶ್ರ ಇತರ ಪದಾಧಿಕಾರಿಗಳನ್ನು ಶೀಘ್ರದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ವರದಿಯಾಗಿದೆ.. ದೇವಾಲಯದ ದರೋಡೆಗೆ ಸಂಬಂಧಿಸಿ ದಂತೆ ತನಿಖಾ ಸಂಘ ಪರಿವಾರ ನಾಯಕರ ಕಡೆಗೆ ಸಾಗ್ತಾ ಇದೆ ಎಂದು ವರದಿಗಳು ತಿಳಿಸಿವೆ.
ಪ್ರಕರಣದ 8 ಆರೋಪಿಗಳನ್ನು ಅಯೋಧ್ಯೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರು ಕಳೆದ ದಿನ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿದ್ದರು. ತನಿಖೆಯ ಭಾಗವಾಗಿ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ. ತನಿಖಾ ತಂಡ ಬಂಧಿತ ವ್ಯಕ್ತಿಗಳಿಂದ 80 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದೆ.
ಈಗಾಗಲೇ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂಪತ್ ರಾಯ್ ರಾಜೀನಾಮೆ ನೀಡಿದ್ದಾರೆ. ಟ್ರಸ್ಟಿ ಸ್ಥಾನಕ್ಕೆ ಅನಿಲ್ ಮಿಶ್ರ ರಾಜೀನಾಮೆ ನೀಡಿದ್ದಾರೆ.












