ಉತ್ತರ ಪ್ರದೇಶ: ಮತದಾರರ ನೋಂದಣಿ ನಮೂನೆಗಳು ಆಧಾರ್ ಪ್ರತಿಗಳು ರಸ್ತೆ ಬದಿಯಲ್ಲಿ ಪತ್ತೆ

0
145

ಸನ್ಮಾರ್ಗ ವಾರ್ತೆ

ಉತ್ತರಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಲಂಬುವಾದ ಎಂಬಲ್ಲಿಯ ರಸ್ತೆಯ ಪೊದೆಗಳಲ್ಲಿ ಮತದಾರರ ನೋಂದಣಿ ನಮೂನೆಗಳು ಮತ್ತು ಆಧಾರ್ ಕಾರ್ಡುಗಳ ನಕಲು ಪ್ರತಿಗಳು ಸೇರಿದಂತೆ ನೂರಾರು ದಾಖಲೆಗಳು ಪತ್ತೆಯಾಗಿವೆ. ಜೂನ್ 22ರಂದು ರಸ್ತೆ ಬದಿಯಲ್ಲಿ ಹರಡಿರುವ ಕಾಗದಗಳನ್ನು ಗಮನಿಸಿದ ದಾರಿಹೋಕರು ವಿಡಿಯೋ ಮಾಡಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಅಧಿಕಾರಿಗಳ ಗಮನ ಸೆಳೆದಿದೆ.

ವಶಪಡಿಸಿಕೊಂಡ ಕಾಗದದಲ್ಲಿ ಮತದಾರರ ನೋಂದಣಿಗೆ ಬಳಸಲಾದ ನಮೂನೆ ಆರು ಅರ್ಜಿಗಳು ಆಧಾರ್ ಕಾರ್ಡ್ ನಕಲು ಪ್ರತಿಗಳು ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಸಂಬಂಧಿತ ದಾಖಲೆಗಳು ಸೇರಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಪ್ರಾಥಮಿಕ ವರದಿಗಳು ಮತ್ತು ವಿಡಿಯೋಗಳ ಪ್ರಕಾರ ದಾಖಲೆಗಳನ್ನು ಚೀಲದಲ್ಲಿ ತುಂಬಿಸಿ ತೆರೆದ ಪ್ರದೇಶದಲ್ಲಿ ಎಸೆಯಲಾಗಿತ್ತು. ಹಳೆಯ ಕಟ್ಟಡದಲ್ಲಿರುವ ಸರ್ಕಾರಿ ದಾಖಲೆ ಕೊಠಡಿಯ ಬೀಗಮುರಿದ ನಂತರ ಅವುಗಳನ್ನು ತೆಗೆದು ಹಾಕಿರಬಹುದು ಎಂದು ಕೆಲವು ವರದಿಗಳು ಹೇಳಿವೆ.