ರಾಮಮಂದಿರ 2024ರಲ್ಲಿ ಪೂರ್ಣವಾಗಲಿದೆ: ಅಲ್ಲಿಯವರೆಗೆ ಬೇರೆ ವಿಷಯ ಎತ್ತಿಕೊಳ್ಳುವುದಿಲ್ಲ; ವಿಹಿಂಪ

0
648

ಸನ್ಮಾರ್ಗ ವಾರ್ತೆ

ಲಕ್ನೋ: ವಾರಣಾಸಿಯ ಗ್ಯಾನ್‍ಪ್ರಿ ಮಸೀದಿಯ ಕೆಳಗೆ ಪ್ರಾಚ್ಯ ವಸ್ತು ಖನನ ಮಾಡಿ ದೇವಸ್ಥಾನದ ಅವಶೇಷಗಳನ್ನು ಹುಡುಕಲು ಕೋರ್ಟ್ ಆದೇಶ ನೀಡಿದ ಬೆನ್ನಿಗೆ ತಮ್ಮ ಈಗಿನ ಗಮನ ಅಯೋಧ್ಯೆಯ ರಾಮಮಂದಿರ ಮಾತ್ರ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

ಶುಕ್ರವಾರ ಹರಿದ್ವಾರದಲ್ಲಿ ನಡೆದ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ವಾರಣಾಸಿಗೆ ಪರಿಗಣನೆ ರಾಮಮಂದಿರ ಪೂರ್ಣಗೊಂಡ ಮೇಲೆ ನೀಡಿದರೆ ಸಾಕು ಎಂದು ತೀರ್ಮಾನವಾಗಿದೆ ಎಂದು ತಿಳಿದು ಬಂದಿದೆ.

ರಾಮ ಜನ್ಮಭೂಮಿ ಪ್ರಧಾನ ವಿಷಯವಾಗಿದೆ. 2024ಕ್ಕೆ ಇದರ ಕೆಲಸ ಮುಗಿಯುತ್ತದೆ. ಗರ್ಭಗುಡಿಯಲ್ಲಿ ರಾಮಲಲ್ಲ ಸ್ಥಾಪಿಸಲಾಗುವುದು. ಅದುವರೆಗೆ ಬೇರೆ ವಿಷಯಗಳಿಗೆ ಪರಿಗಣನೆ ನೀಡಲಾಗದು ಎಂದು ಸಂಘಟನೆಯ ಕಾರ್ಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದರು.

ವಾರಣಾಸಿಯಲ್ಲಿ ಐತಿಹಾಸಿಕ ವಸ್ತುಗಳನ್ನು ಹುಡುಕಲು ಕೋರ್ಟ್ ಆದೇಶ ನೀಡಿದೆ. ಕಾನೂನು ಪೀಠದಲ್ಲಿ ಏನು ಆಗಬಹುದು ಎಂದು ಕಾಯುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಇದೇ ವೇಳೆ ಹೇಳಿದರು.