ಸನ್ಮಾರ್ಗ ವಾರ್ತೆ
ಉಡುಪಿ,ಜು.18: “ಅಯೋಧ್ಯೆಯಲ್ಲಿ ಅಂದಾಜು 300 ಕೋಟಿ ರೂ.ಗಳಲ್ಲಿ ಸುಂದರ ಮತ್ತು ಭವ್ಯವಾದ ರಾಮ್ ಮಂದಿರವನ್ನು ನಿರ್ಮಿಸಲಾಗುವುದು” ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರಲ್ಲಿ ಒಬ್ಬರಾದ ಪೇಜಾವರ ಸ್ವಾಮೀಜಿ, ಅಯೋಧ್ಯೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
“300 ಕೋಟಿ ರೂ.ವೆಚ್ಚದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುವುದು. ಆದರೆ 70 ಎಕರೆ ಜಮೀನಿನ ಅಭಿವೃದ್ಧಿಗೆ 1,000 ಕೋಟಿ ರೂಪಾಯಿಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
“ಈ ಮೊತ್ತವನ್ನು ವಿವಿಧ ಕಂಪೆನಿಗಳಿಂದ ತಮ್ಮ ಸಿಎಸ್ಆರ್ ಅನುದಾನದಡಿಯಲ್ಲಿ ಸಂಗ್ರಹಿಸಲು ಸಮಿತಿ ನಿರ್ಧರಿಸಿದೆ. ರಾಮ್ ಮಂದಿರವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಮನೆಯವರು ಪಾಲ್ಗೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ವ್ಯಕ್ತಿಯಿಂದ ಕನಿಷ್ಠ 10 ರೂ. ಮತ್ತು ಪ್ರತಿ ಮನೆಯಿಂದ 100 ರೂ.ಯನ್ನು ಸಂಗ್ರಹಿಸಲು ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ರಾಷ್ಟ್ರವ್ಯಾಪಿ ಚಾಲನೆ ನಡೆಯಲಿದೆ.
ಇದಕ್ಕೂ ಮುನ್ನ ಕನಿಷ್ಠ 15 ದಿನಗಳಿಗೂ ಮೊದಲು ತಳಪಾಯ ಕಲ್ಲು ಹಾಕುವ ದಿನಾಂಕವನ್ನು ಘೋಷಿಸಲಾಗುತ್ತದೆ.
ಎಲ್&ಟಿ ಕಂಸ್ಟ್ರಕ್ಷನ್ಸ್ಗೆ ಮಂದಿರ ನಿರ್ಮಾಣದ ಕೆಲಸವನ್ನು ನೀಡಲಾಗಿದೆ. ದೇವಾಲಯದ ಕೆಳಗೆ 200 ಅಡಿ ಆಳದಲ್ಲಿ ತಾಮ್ರದ ತಟ್ಟೆಯ ಶಾಸನವನ್ನು ಹೂಳಲಾಗುವುದು” ಎಂದು ಅವರು ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












