ಸನ್ಮಾರ್ಗ ವಾರ್ತೆ
ಮಂಗಳೂರು,ಜು,18: ಬೆಳ್ತಂಗಡಿಯ ಮಹಿಳೆಯೊಬ್ಬರು ಜುಲೈ 15ರ ಬುಧವಾರ ಮಗುವಿಗೆ ಜನ್ಮ ನೀಡಿದ್ದು, ಕೊರೋನ ಪಾಸಿಟಿವ್ ಎಂದು ತಿಳಿಯುತ್ತಲೇ ಪತಿಯು 16ರ ಗುರುವಾರ ರಾತ್ರಿ ಆಸ್ಪತ್ರೆಯ ಗೇಟ್ ಲಾಕ್ ಅನ್ನು ಮುರಿದು
ಪತ್ನಿ ಹಾಗೂ ಮಗುವನ್ನು ಕರೆದುಕೊಂಡು ಹೋದ ಘಟನೆಯು ನಡೆದಿತ್ತು.
ಜುಲೈ 16 ರಂದು ಮಹಿಳೆಯ ಕೊರೋನಾ ಪರೀಕ್ಷಾ ವರದಿ ಬಂದ ನಂತರ ವೈದ್ಯರು ಆಕೆಗೆ ಮಾಹಿತಿ ನೀಡಿ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದ್ದರು. ಆ ರಾತ್ರಿ ಆಗಮಿಸಿದ ಪತಿ ಆಸ್ಪತ್ರೆಯ ಸಿಬ್ಬಂದಿಯ ಕೋರಿಕೆಗಳನ್ನು ಕಡೆಗಣಿಸಿ ತನ್ನ ಹೆಂಡತಿ ಮತ್ತು ಮಗುವನ್ನು ಬಲವಂತವಾಗಿ ಮನೆಗೆ ಕರೆದೊಯ್ದಿದ್ದರು.
ಸ್ಥಳೀಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ಪೊಲೀಸ್ ತಂಡವು ಅವರ ಮನೆಗೆ ತೆರಳಿ ಕುಟುಂಬದ ಮನವೊಲಿಸಿ, ಅದೇ ರಾತ್ರಿ ಮಹಿಳೆ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆ ತಂದಿದ್ದು, ಶುಕ್ರವಾರ ಅವರನ್ನು ಮಂಗಳೂರಿನ ಲೇಡಿ ಗೋಶನ್ ಆಸ್ಪತ್ರೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












