ಕೇರಳದಲ್ಲಿ ಮತ್ತೊಂದು ಘಟನೆ: ತಾಯಿಯ ಗೆಳೆಯನಿಂದ ಅಪ್ರಾಪ್ತ ಬಾಲಕನಿಗೆ ಮಾರಣಾಂತಿಕ ಹಲ್ಲೆ

0
866

ಇಡುಕ್ಕಿ,ಮೇ 4: ಏಳು ವರ್ಷದ ಬಾಲಕನಿಗೆ ತಾಯಿಯ ಗೆಳೆಯ ಕ್ರೂರವಾಗಿ ಹೊಡೆದ ಘಟನೆಯ ನಂತರ ಪುನಃ ತೊಡುಪುಯದಲ್ಲಿ ಅಂತಹದ್ದೇ ಇನ್ನೊಂದು ಘಟನೆ ನಡೆದಿದೆ. ತೊಡುಪುಝದಲ್ಲಿ ಹದಿನಾಲ್ಕು ವರ್ಷದ ಬಾಲಕನಿಗೆ ಗೆಳೆಯರೊಂದಿಗೆ ಆಡಲು ಹೋಗಿದ್ದಾನೆಂದು ತಾಯಿಯ ಗೆಳೆಯ ಮಾರಣಾಂತಿಕವಾಗಿ ಥಳಿಸಿದ್ದಾನೆ. ತಾಯಿಯ ಗೆಳೆಯ ಮತ್ತು ಅಜ್ಜಿಯ ತಂಗಿಯ ಮಗನಾದ ಜಯೇಶ್ ಎಂಬಾತ ಬಾಲಕನನ್ನು ಕ್ರೂರವಾಗಿ ಹಿಂಸಿಸಿದ ವ್ಯಕ್ತಿಯಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಕೋರ್ಟಿನಲ್ಲಿ ಹಾಜರು ಪಡಿಸಲಾಗುವುದೆಂದು ಪೊಲೀಸರು ತಿಳಿಸಿದರು. ಬಾಲಕನಿಗೆ ಶಸ್ತ್ರಕ್ರಿಯೆ ನಡೆದ ಹೊಟ್ಟೆಯ ಭಾಗಕ್ಕೆ ಜಯೇಶ್ ಫ್ರಿಡ್ಜ್‌ನ ಎಡೆಯಲ್ಲಿ ಒತ್ತಿಟ್ಟು ಹೊಡೆದಿದ್ದಾನೆ. ತನ್ನ ಸಂಬಂಧಿಕನೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿ ಜಯೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದು ತಿಂಗಳ ಹಿಂದೆ ತೊಡುಪುಯದಲ್ಲಿ ಏಳು ವರ್ಷದ ಬಾಲಕನಿಗೆ ಮಲತಂದೆ ಅರುಣ್ ಆನಂದ್ ಎಂಬಾತ ಮಾರಣಾಂತಿಕ ಹೊಡೆದ ಪರಿಣಾಮವಾಗಿ ಕೋಮಾದಲ್ಲಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು.