ಕಾಂಗ್ರೆಸ್‍ನಲ್ಲಿ ಕೂತು ಯಾರೂ ಸ್ತುತಿ ಗೀತೆ ಹಾಡಬೇಕಿಲ್ಲ- ಕೆ. ಮುರಳೀಧರನ್

0
528

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಆ.26: ಕಾಂಗ್ರೆಸ್ಸಿನಲ್ಲಿದ್ದು ಕೊಂಡು ಯಾರೂ ನರೇಂದ್ರ ಮೋದಿ ಸ್ತುತಿ ಹಾಡಬೇಕಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಸಂಸದ ಕೆ. ಮುರಳೀಧರನ್ ಹೇಳಿದ್ದಾರೆ. “ಕಾಂಗ್ರೆಸ್ ಯಾರದೇ ಕುಟುಂಬದ ಆಸ್ತಿಯಲ್ಲ. ಮೋದಿ ಯಾವ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿಲ್ಲ. ಮೋದಿ ಮಾಡುವ ಒಳ್ಳೆಯ ಕೆಲಸಗಳನ್ನು ಹೊಗಳುವೆ. ಯಾವಾಗಲೂ ಆರೋಪಿಸುತ್ತಿರುವುದರಲ್ಲಿ ಅರ್ಥವಿಲ್ಲ” ಎಂದು ಶಶಿ ತರೂರ್ ಸಹಿತ ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮೋದಿಯನ್ನು ದುಷ್ಟ ನಾಯಕನೆಂದು ಯಾವಾಗಲೂ ಚಿತ್ರಿಸುವುದರಿಂದ ಪ್ರಯೋಜನವಿಲ್ಲ. ಒಳ್ಳೆಯದ್ದಕ್ಕೆ ಅಂಗೀಕಾರ ನೀಡಬೇಕಾಗಿದೆ ಎಂದು ಜಯರಾಮ್ ರಮೇಶ್, ಮನು ಅಭಿಶೇಕ್ ಸಿಂಘ್ವಿ ಮುಂತಾದ ಕಾಂಗ್ರೆಸ್ಸಿಗರು ಹೇಳಿದ್ದರು.