ಮೆಲ್ಬರ್ನ್,ಮೇ 9: ಪ್ರಾರ್ಥನೆಗೆ ಬಂದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ವ್ಯಸಗಿದ ಆರೋಪದಲ್ಲಿ ಭಾರತದ ಯೋಗ ಗುರು ಆನಂದ್ಗಿರಿಯನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದಾರೆ. ಪ್ರಾರ್ಥನೆಗಾಗಿ ಮನೆಗೆ ಕರೆಯಿಸಿಕೊಂಡು ಯುವತಿಯರನ್ನು ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಗಿರಿಯ ವಿರುದ್ಧ ಪೊಲೀಸ್ ಕೇಸು ದಾಖಲಾಗಿದೆ. 38 ವರ್ಷದ ಆನಂದ್ ಗಿರಿಯನ್ನು ಸಿಡ್ನಿಯಲ್ಲಿ ಬಂಧಿಸಲಾಯಿತು. ಆರು ವಾರದ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಉತ್ತರಪ್ರದೇಶದ ಪ್ರಯಾಗ್ ರಾಜ್ನ ನಿವಾಸಿಯಾಗಿದ್ದಾರೆ. ಇದಕ್ಕಿಂತ ಮೊದಲು ಹಲವು ಬಾರಿ ಆಸ್ಟ್ರೇಲಿಯಾಕ್ಕೆ ಅವರು ಭೇಟಿ ನೀಡಿದ್ದಾರೆ. ಹಿಂದೆ ಸಂದರ್ಶನ ನೀಡಿದ್ದಾಗ ಕೇಸಿಗೆ ಆಸ್ಪದವಾದ ಘಟನೆ ನಡೆಯಿತು. 2016 ಹೊಸ ವರ್ಷ ಆಚರಣೆಯ ದಿನದ ವೇಳೆ 29 ವರ್ಷದ ಗಿರಿ ಅತ್ಯಾಚಾರ ಮಾಡಿದ್ದರು ಎಂದು ಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ. 2018ರಲ್ಲಿ ಪ್ರಾರ್ಥನೆಗಾಗಿ ಬಂದ 34 ವರ್ಷದ ಮಹಿಳೆಯನ್ನು ಗಿರಿ ಅತ್ಯಾಚಾರ ಮಾಡಿದ್ದರು. ಆರೋಪಿಗೆ ಜಾಮೀನು ನಿರಾಕರಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜೂನ್ 26ಕ್ಕೆ ಅವರನ್ನು ಮಟ್ರಡ್ರಟ್ರ ಸ್ಥಳೀಯ ಕೋರ್ಟಿಗೆ ಹಾಜರು ಪಡಿಸಲಾಗುವುದು ಎಂದು ಆಸ್ಟ್ರೇಲಿಯದ ಮಾಧ್ಯಮಗಳು ವರದಿ ಮಾಡಿವೆ.












