ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.23: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬಿಕ್ಕಟ್ಟು ಎದುರಿಸುತ್ತಿದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಮನ್‌ರಲ್ಲಿ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಸಹಕಾರ ಕೋರಿದ್ದಾರೆ. ಲೈಸೆನ್ಸ್ ಫೀಸು, ಜಿಎಸ್‍ಟಿ ರಿಯಾಯತಿ ಅಗತ್ಯವಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಟೆಲಿಕಾಂ ಸೇವಾದಾತರ ಸಭೆ ಆಗಸ್ಟ್ 22ಕ್ಕೆ ಕರೆಯಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್‍ರಿಗೆ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಸಭೆಯಲ್ಲಿ ವಡಾಫೋನ್, ಐಡಿಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲ; “ಟೆಲಿಕಾಂ ಉಪಕರಣಗಳ ಮೇಲಿರುವ ಜಿಎಸ್‍ಟಿ ದರವನ್ನು ಶೇ.18ರಿಂದ ಶೇ.12ಕ್ಕೆ ಇಳಿಸಬೇಕೆಂದು” ಆಗ್ರಹಿಸಿರುವುದಾಗಿ ರವಿಶಂಕರ್ ಹೇಳಿದರು. ಟೆಲಿಕಾಂ ಕ್ಷೇತ್ರದ ಆದಾಯ 2017ರ ಆರ್ಥಿಕ ವರ್ಷದಲ್ಲಿ 185 ಲಕ್ಷ ಕೋಟಿಯಾಗಿದ್ದರೆ ಈಗಿನ ಆರ್ಥಿಕ ವರ್ಷದಲ್ಲಿ 1.39ಲಕ್ಷ ಕೋಟಿಗೆ ಕುಸಿದಿದೆ. ಸುಮಾರು ಎಂಟು ಲಕ್ಷ ಕೋಟಿ ಟೆಲಿಕಾಂ ಕ್ಷೇತ್ರದಲ್ಲಿ ಒಟ್ಟು ಬಾಧ್ಯತೆಯಾಗಿದ್ದು ರಿಯಲನ್ಸ್ ಜಿಯೊ ಮಾತ್ರ ಲಾಭದಲ್ಲಿರುವ ಕಂಪೆನಿಯಾಗಿದೆ.












