ಉತ್ತರ ಪ್ರದೇಶ ಶಾಲೆಗಳಲ್ಲಿ ಮಧ್ಯಾಹ್ನದೂಟಕ್ಕೆ ಚಪಾತಿ, ಉಪ್ಪು!

0
662

ಸನ್ಮಾರ್ಗ ವಾರ್ತೆ

ಲಕ್ನೊ, ಆ. 23: ಉತ್ತರಪ್ರದೇಶದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದೂಟಕ್ಕೆ ಚಪಾತಿ-ಉಪ್ಪು ನೀಡಿದ ಘಟನೆಯ ನಡೆದಿದೆ. ಮಕ್ಕಳಿಗೆ ಪೋಷಕ ಆಹಾರ ನೀಡುವ ಮಧ್ಯಾಹ್ನದೂಟದ ಯೋಜನೆಯಿದ್ದು; ಚಪಾತಿ-ಉಪ್ಪು ಈ ಯೋಜನೆಯಡಿಯಲ್ಲಿ ವಿತರಿಸಲಾಗಿದೆ. ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಮಕ್ಕಳಿಗೆ ಊಟದೊಂದಿಗೆ-ಉಪ್ಪು ನೀಡಿದ ಬೆನ್ನಿಗೆ ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮಿರ್ಝಾಪುರದ ಶಿಯೂರಿನ ಶಾಲೆಯಲ್ಲಿ ಮಕ್ಕಳು ರೊಟ್ಟಿ-ಉಪ್ಪು ತಿನ್ನುವ ದೃಶ್ಯ ವೈರಲ್ ಆದ ನಂತರ ಘಟನೆ ಬಹಿರಂಗವಾಗಿದೆ. ವೀಡಿಯೊ ಜಿಲ್ಲಾ ಮ್ಯಾಜಿಸ್ಟ್ರೇಟ್‍ರ ಗಮನಕ್ಕೆ ಬಂದ ನಂತರ ತನಿಖೆಗೆ ಆದೇಶ ಹೊರಡಿಸಲಾಗಿದೆ. ನಂತರ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ. ಮಾತ್ರವಲ್ಲ ಜಮಾಲ್‌ಪುರ ಬ್ಲಾಕ್ ಶಿಕ್ಷಣಾಧಿಕಾರಿಯಿಂದ ವಿವರಣೆಯನ್ನು ಕೇಳಲಾಗಿದೆ.