ಮಮತಾ ಬ್ಯಾನರ್ಜಿಯ ರಾಜೀನಾಮೆ: ತಿರಸ್ಕರಿಸಿದ ತೃಣಮೂಲ ಕಾಂಗ್ರೆಸ್

0
431

ಕೊಲ್ಕತಾ, ಮೇ 27: ಪಶ್ಚಿಮಬಂಗಾಳದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ದೊರೆಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿಯವರ ಪ್ರಸ್ತಾವವನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ಲೋಕಸಭಾ ಚುನಾವಣಾ ಫಲಿತಾಂಶ ಬೆನ್ನಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸ್ಥಾನ ತೊರೆಯುವ ಇಂಗಿತವನ್ನು ಪ್ರಕಟಿಸಿದ್ದರು. ಪಶ್ಚಿಮಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸನ್ನು ಪಡೆದಿದೆ.

ಪಶ್ಚಿಮಬಂಗಾಳದ 42 ಸ್ಥಾನಗಳಲ್ಲಿ ಬಿಜೆಪಿ ಹದಿನೆಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ತೃಣಮೂಲ ಕಾಂಗ್ರೆಸ್ 22 ಸೀಟುಗಳಲ್ಲಿ ಗೆಲುವು ಗಳಿಸಿದ್ದರೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ 34 ಸೀಟುಗಳಲ್ಲಿ ತೃಣಮೂಲ ಕಾಂಗ್ರೆಸ್ ವಿಜಯ ಸಾಧಿಸಿತ್ತು. ಮತಗಳಿಸುವ ಉದ್ದೇಶದಿಂದ ಬಿಜೆಪಿ ಜನರಲ್ಲಿ ಧಾರ್ಮಿಕ ಧ್ರುವೀಕರಣವನ್ನು ನಡೆಸಿತು ಎಂದು ಮಮತಾ ಆರೋಪಿಸಿದ್ದಾರೆ.