ಸರ್ದಾರ್ ಪಟೇಲ್‍ರ ಹೆಸರಿನಲ್ಲಿ ಮತಯಾಚಿಸಿದ ಬಿಜೆಪಿ ಅವರನ್ನು ಅಪಮಾನಿಸುತ್ತಿದೆ: ಹಾರ್ದಿಕ್ ಪಟೇಲ್

0
465

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಗುಜರಾತ್ ಮೊಟೊರದ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂಗೆ’ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂಬುದಾಗಿ ಮರುನಾಮಕರಣ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ರಂಗಪ್ರವೇಶಿಸಿದ್ದಾರೆ.

ಸರ್ದಾರ್ ಪಟೇಲ್‍ರ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಅವರನ್ನು ಅಪಮಾನಿಸುತ್ತಿದೆ ಎಂದು ಹಾರ್ದಿಕ್ ಹೇಳಿದರು. ಇದು ಅಪಮಾನ. ಇದನ್ನು ಗುಜರಾತಿನ ಜನರು ಸಹಿಸಲಾರರು. ಇದಕ್ಕೆ ಉತ್ತರ ಅವರಿಗೆ ಸಿಗಲಿದೆ ಎಂದು ಅವರು ಹೇಳಿದರು.

ಮೊಟೊರ ಸ್ಟೇಡಿಯಂ ಅಹ್ಮದಾಬದಿನಲ್ಲಿದ್ದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕ್ರೀಡಾಂಗಣ ಹೊಂದಿದೆ. ಇದಕ್ಕೆ ಸರ್ದಾರ್ ವಲಭಬಾಯಿ ಸ್ಟೇಡಿಯಂ ಎಂದು ಹೆಸರಿಡಲಾಗಿತ್ತು. ಈದೀಗ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ಇದು ಸರ್ದಾರ್ ಪಟೇಲರನ್ನು ಅವಮಾನಿಸಿದ್ದಲ್ಲವೇ? ಪಟೇಲ್ ಹೆಸರಿನಲ್ಲಿ ಇವರು ಮತ ಕೇಳುತ್ತಾರೆ. ಅವರನ್ನೇ ಈಗ ಅಪಮಾನಿಸುತ್ತಿದ್ದಾರೆ. ಸರ್ದಾರ್ ಪಟೇಲ್‌ರ ಅವಮಾನವನ್ನು ಗುಜರಾತಿಗಳು ಸಹಿಸಲಾರರು ಎಂದು ಹಾರ್ದಿಕ್ ಟ್ವೀಟ್ ಮಾಡಿದ್ದಾರೆ.