ಸನ್ಮಾರ್ಗ ವಾರ್ತೆ
ಲಕ್ನೊ:ಕ್ಷುಲ್ಲಕ ಕೌಟುಂಬಿಕ ಕಲಹಕ್ಕಾಗಿ ನಿವೃತ್ತ ಅಧ್ಯಾಪಕರೊಬ್ಬರನ್ನು ಮಗ ಮತ್ತು ಸೊಸೆ ಸೇರಿ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಅಕ್ಟೋಬರ್ 18ಕ್ಕೆ ವಝೀರಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯ ಅಮ್ರೊಲಿ ಗ್ರಾಮದಲ್ಲಿ ಘಟನೆಯು ನಡೆದಿತ್ತು. ಮಾರ್ಕೆಟಿಗೆ ಹೋಗುತ್ತಿದ್ದ ಸತ್ಪಾಲ್ರಿಗೆ ಗುಂಡು ಹಾರಿಸಲಾಗಿತ್ತು. ಆರೋಪಿಗಳಾದ ಮಗ-ಸೊಸೆಯನ್ನು ಪೊಲೀಸರು ಸೋಮವಾರ ಬಂಧಿಸಿದರು.
ಘಟನೆಯಲ್ಲಿ ಸತ್ಪಾಲ್ರ ನಿಕಟ ಸಂಬಂಧಿಕನಿಗೂ ಪಾಲಿದೆಯೆಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಅಧ್ಯಾಪಕನಾಗಿ ನಿವೃತ್ತಗೊಂಡ ಬಳಿಕ ಸತ್ಪಾಲ್ರವರು ತನ್ನ ಕಿರಿಯ ಮಗ ವಿಪಿನ್ ಸಿಂಗ್ರ ಜೊತೆಗೆ ವಾಸಿಸುತ್ತಿದ್ದರು. ಈತನಿಗೆ ಒಂದು ಟ್ರಾಕ್ಟರ್, ಕಾರು ಖರೀದಿಸಿದ್ದರಲ್ಲದೇ ಡೈರಿ ಫಾರ್ಮ್ ಆರಂಭಿಸಲು ಸಹಾಯವನ್ನು ಮಾಡಿದ್ದರು. ಆದರೆ, ನಂತರ ಮಗ ಸೊಸೆಯ ವರ್ತನೆಯಿಂದ ನೊಂದ ಸತ್ಪಾಲ್ ತಮ್ಮ ಹಿರಿಯ ಮಗ ಹರೀಶ್ ಜೊತೆ ವಾಸಿಸಲು ತೊಡಗಿದ್ದರು.












