ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾರಿಗೆ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಏನಾಗಬೇಕು? ಸಾಮಾಜಿಕ ಮಾಧ್ಯಮಗಳ ಟ್ರೋಲ್ ಕಥೆ

0
191

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಿಷಿ ಸುನಕ್‍(42) ಇಂಗ್ಲೆಂಡಿನ ಪ್ರಧಾ‌ನಿಯಾದ ಬೆನ್ನಿಗೆ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾರ ಚಿತ್ರಗಳನ್ನು ಹಂಚಿಕೊಳ್ಳುವ ಕಾಯಕವು ನೆಟ್ಟಿಗರಿಂದ ನಡೆಯುತ್ತಿದ್ದು, ಇಬ್ಬರ ನಡುವೆ ಸಾಮ್ಯತೆಯನ್ನು ಹುಡುಕುತ್ತಿದ್ದಾರೆ. ರಿಷಿ ಸುನಕ್‍ರಿಗೆ ಅಭಿನಂದನೆಯ ಸಂದೇಶಗಳನ್ನು ಪೋಸ್ಟ್ ಮಾಡುವಾಗ ಮೋದಿ ಮತ್ತು ಆಶಿಶ್ ನೆಹ್ರಾ ಮಾತಾಡುವ ಚಿತ್ರವನ್ನು ನೆಟ್ಟಿಗರು ಹಂಚಿಕೊಂಡಿದ್ದು, “ಕೊಹಿನೂರ್ ರತ್ನ ಭಾರತಕ್ಕೆ ತರುವ ಕುರಿತು ಮೋದಿ-ಸುನಕ್ ನಡುವೆ ಮಾತುಕತೆ ನಡೆಯುತ್ತಿದೆ” ಎಂದು ಒಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಆಶಿಶ್ ನೆಹ್ರಾ ಓದುತ್ತಿರುವ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿ “ಕೊಹಿನೂರ್ ರತ್ನವನ್ನು ಭಾರತಕ್ಕೆ ತರುವ ಪ್ಲಾನ್ ರೂಪಿಸುತ್ತಿರುವ ಸುನಕ್” ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಆಶಿಶ್ ನೆಹ್ರಾ ಬಾಲಕ ಕೊಹ್ಲಿಗೆ ಉಡುಗೊರೆ ಕೊಡುವ ಚಿತ್ರವನ್ನು ಪೋಸ್ಟ್ ಮಾಡಿ “ರಿಷಿ ಸುನಕ್ ವಿರಾಟ್ ಕೊಹ್ಲಿಯ ಜೊತೆ” ಎಂದು ಟಿಪ್ಪಣಿ ಬರೆಯಲಾಗಿದೆ.

ಹೀಗೆ, ಸುನಕ್ ಮತ್ತು ನೆಹ್ರಾರ ನಡುವಿನ ಹೋಲಿಕೆ ಸಾಬೀತು ಪಡಿಸಲು ಒಂದೇ ಭಂಗಿಯ ಇಬ್ಬರ ಚಿತ್ರಗಳನ್ನು ಹುಡುಕಿ ಪೋಸ್ಟ್ ಮಾಡುವಲ್ಲಿ ನೆಟ್ಟಿಗರು ಸ್ಪರ್ಧೆಗಿಳಿದಿದ್ದಾರೆ. ಇವುಗಳ ಜೊತೆಗೆ ಹಾಸ್ಯಸ್ಪದ ಕಮೆಂಟ್‍ಗಳನ್ನು ಹಾಕಲಾಗುತ್ತಿದೆ‌.

ಮಾಜಿ ಭಾರತ ಓಪನರ್ ಕ್ರಿಕೆಟಿಗ ವೀರೇಂದ್ರ ಸೆವಾಗ್ ಕೂಡ ಇಬ್ಬರ ಹೋಲಿಕೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

“ಭಾರತ ವಂಶಸ್ಥ ತಂದೆ ತಾಯಿಯ ಮಗನಾಗಿ ಸುನಕ್ ಜನಿಸಿದವರು. ಭಗವತ್ ಗೀತೆಯ ಶ್ಲೋಕಗಳನ್ನು ಉದ್ಧರಿಸುವ ದೀಪಾವಳಿ ದಿನದಲ್ಲಿ ದೀಪಗಳನ್ನು ಉರಿಸುವ ಚಿತ್ರಗಳು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಅವರು ಭಾರತ ಸಂಸ್ಕೃತಿಯಲ್ಲಿ ಬೇರೂರಿದ ವ್ಯಕ್ತಿಯಾದ್ದರಿಂದ ಕೊಹಿನೂರ್ ಎಂಬ ರತ್ನಕ್ಕಾಗಿ ನಾವು ಆಗ್ರಹಿಸಿದ್ದು ಸರಿಯಾಗಿದೆ ಅಲ್ವೇ” ಎಂದು ಚಿತ್ರವನ್ನು ಹಂಚಿಕೊಂಡು ಕೆಲವರು ಪ್ರಶ್ನಿಸುತ್ತಿದ್ದಾರೆ.

ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ  ರಿಷಿ ಸುನಕ್‍‌ರವರ ಪತ್ನಿಯಾಗಿದ್ದಾರೆ. ಅಂದ ಹಾಗೆ, ಸುನಕ್‌ ಬ್ರಿಟನ್‍ನ ಮಾಜಿ ವಿತ್ತ ಸಚಿವ ಕೂಡ ಹೌದು.