ತನ್ನ ಮೇಲೆ ಹೊರಿಸಿದ ಆರೋಪಗಳು ನಿರಾಧಾರಿತ: ಮೊದಲ ಬಾರಿ ಮಾಧ್ಯಮಗಳ ಮುಂದೆ ಬಂದ ರಿಯಾ ಚಕ್ರವರ್ತಿ

0
449

ಸನ್ಮಾರ್ಗ ವಾರ್ತೆ

ಮುಂಬಯಿ,ಆ.27: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‍ಪೂತ್ ಸಾವು ಪ್ರಕರಣದ ಮುಖ್ಯ ಆರೋಪಿ ರಿಯಾ ಚಕ್ರವರ್ತಿ ಮೊದಲ ಬಾರಿ ಮೌನ ಮುರಿದಿದ್ದಾರೆ. ತನ್ನ ಮೆಲೆ ಹೊರಿಸಲಾದ ಆರೋಪವನ್ನು ಅವರು ನಿರಾಕರಿಸಿದರು. ನ್ಯೂಸ್ ಚ್ಯಾನೆಲ್‍ವೊಂದಕ್ಕೆ ನೀಡಿದ ಇಂಟರ್‌ವ್ಯೂ ನಲ್ಲಿ ಯುರೋಪ್ ಪ್ರವಾಸದ ಕುರಿತು ಅವರು ವಿವರಿಸಿದರು.

ಈ ಪ್ರವಾಸದ ಬಳಿಕ ಸುಶಾಂತ್ ಬದಲಾಗಿದ್ದರು ಎಂದು ಹೇಳಲಾಗುತ್ತಿತ್ತು. ತಾನು ಸುಶಾಂತ್‍ರ ಹಣದಲ್ಲಿ ಬದುಕುತ್ತಿರಲಿಲ್ಲ ಮತ್ತು ನಾವಿಬ್ಬರು ಒಂದು ಜೋಡಿಗಳಂತೆ ಇದ್ದೆವು ಎಂದಿದ್ದಾರೆ. ನ್ಯೂಸ್ ಚ್ಯಾನೆಲ್ ಆಜ್‍ ತಕ್‍ಗೆ ನೀಡಿದ ಸಂದರ್ಶನದಲ್ಲಿ ರಿಯಾ ಹೇಳಿದರು.

“ಯುರೋಪ್ ಪ್ರವಾಸಕ್ಕೆ ನಾವು ಹೋಗುತ್ತಿದ್ದೆವು. ಆಗ ಸುಶಾಂತ್ ವಿಮಾನದಲ್ಲಿ ಕುಳಿತುಕೊಳ್ಳಲು ಹೆದರಿಕೆಯಾಗುತ್ತಿದೆ ಎಂದು ಹೇಳಿದ್ದರು. ಅದಕ್ಕಾಗಿ ಅವರು ಮದ್ದು ಸೇವಿಸುತ್ತಿದ್ದರು. ಅದರ ಹೆಸರು ಮೊಡಾಫಿನಿಲ್ ಆಗಿದೆ. ವಿಮಾನದಲ್ಲಿ ಹೋಗುವ ಮೊದಲೂ ಅವರು ಆ ಮದ್ದು ಸೇವಿಸಿದ್ದರು. ಯಾಕೆಂದರೆ ಆ ಮದ್ದು ಯಾವಾಗಲೂ ಸುಶಾಂತ್‍ರ ಬಳಿ ಇರುತ್ತಿತ್ತು.

ಪ್ಯಾರಿಸ್‍ನಲ್ಲಿ ನನ್ನ ಒಂದು ಚಿತ್ರೀಕರಣವಿತ್ತು. ಅದಕ್ಕಾಗಿ ಇವೆಂಟ್ ಆರ್ಗನೈಝ್ ಮಾಡುವ ಕಂಪೆನಿಯ ಕಡೆಯಿಂದ ವಿಮಾನದ ಟಿಕೆಟ್ ಮತ್ತು ಹೋಟೆಲ್ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಇದು ಸುಶಾಂತ್‍ರ ಯೋಜನೆಯಾಗಿತ್ತು. ಈ ರೀತಿ ಯುರೋಪ್ ಪ್ರವಾಸ ಮಾಡಿದೆವು. ಸುಶಾಂತ್ ಇದರ ನಂತರ ನನ್ನ ಟಿಕೆಟ್ ಕ್ಯಾನ್ಸಲ್ ಮಾಡಿಸಿದರು. ತನ್ನ ಸ್ವಂತ ಹಣದಿಂದ ಫಸ್ಟ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರು. ನಾನು ಅದಕ್ಕೆ ಅವರನ್ನು ವಿರೋಧಿಸಿದೆ. ನೀವು ತುಂಬ ಹಣ ಖರ್ಚು ಮಾಡುತ್ತೀರಿ ಎಂದಿದ್ದೆ. ಯಾಕೆಂದರೆ ಅದು ಸುದೀರ್ಘ ಪ್ರವಾಸವಾಗಿತ್ತು. ನಾವು ಪ್ಯಾರಿಸ್‍ನಲ್ಲಿ ಇಳಿದೆವು.

ಮೂರು ದಿನಗಳ ಕಾಲ ಸುಶಾಂತ್ ಕೋಣೆಯಿಂದ ಹೊರಗೆ ಬರಲಿಲ್ಲ. ಹೋಗುವ ಮೊದಲು ಅವರು ತುಂಬ ಸಂತಸದಲ್ಲಿದ್ದರು. ಪ್ಯಾರಿಸ್‍ಗೆ ತಲುಪಿದ ಬಳಿಕ ಅವರು ಕೋಣೆಯಿಂದ ಹೊರ ಬರಲಿಲ್ಲ. ಸ್ವಿಟ್ಝರ್‍ಲೆಂಡ್ ತಲುಪಿದಾಗ ಸಂತಸವಾಗಿದ್ದರು. ನಾವು ಇಟಲಿ ತಲುಪಿದಾಗ ನಮ್ಮ ಹೊಟೇಲ್‍ನ ಕೋಣೆಯಲ್ಲಿ ಒಂದು ಪ್ರತ್ಯೇಕ ರೀತಿಯ ವಿನ್ಯಾಸವಿತ್ತು. ಸುಶಾಂತ್ ಇಲ್ಲಿ ಎಲ್ಲ ಇದೆ ಎಂದರು. ಆದರೆ ನಾನು ಒಂದು ಕೆಟ್ಟ ಕನಸು ಆಗಬಹುದು ಎಂದೆ. ನಂತರ ಸುಶಾಂತ್‍ರ ಪರಿಸ್ಥಿತಿ ಬದಲಾಯಿತು. ಮತ್ತು ಅವರು ಕೋಣೆಯಿಂದ ಹೊರ ಬರಲಿಲ್ಲ.

ರಿಯ ತನ್ನ ಇಂಟರ್ ವ್ಯೂ‌ನಲ್ಲು 2013ರಲ್ಲಿ ಸುಶಾಂತ್‍ರಿಗೆ ಏನೋ ಆಗಿತ್ತು. ಆಗ ಅವರಿಗೆ ಖಿನ್ನತೆಯಂತಹದು ಆರಂಭವಾಗಿತ್ತು. ಆಗ ವೈದ್ಯರನ್ನೂ ಭೇಟಿಯಾಗಿದ್ದರು. ವೈದ್ಯರ ಹೆಸರು ಹರೇಶ್ ಶೆಟ್ಟಿ ಎಂದಾಗಿದೆ. ಅವರು ಸುಶಾಂತ್‍ರಿಗೆ ಔಷಧದ ಕುರಿತು ಹೇಳಿದ್ದರು. ರಿಯಾರ ಪ್ರಕಾರ ರಿಯಾ ಸುಶಾಂತ್‍ರಲ್ಲಿ ಏನಾಗುತ್ತಿದೆ ಎಂದು ಕೇಳಿದ್ದರು. ಆಗ ಸುಶಾಂತ್ ಅವರಿಗೆ 2013ರ ನಂತರದ ವಿಷಯ ತಿಳಿಸಿದರು. ಆದರೆ ಅವರಿಗೆ ಆಗ ಡಿಪ್ರೆಶನ್ ಅನುಭವಾವಾಗುತ್ತಿತ್ತು. ಆದ್ದರಿಂದ ಯುರೋಪ್ ಪ್ರವಾಸದ ಸಮಯವನ್ನು ಕಡಿಮೆ ಮಾಡಲಾಗಿತ್ತು.

ಯುರೋಪ್ ಪ್ರವಾಸದಲ್ಲಿ ಸಹೋದರ ಶೈವಿಕ್‍ರನ್ನು ಜೊತೆಗೆ ಕರೆದುಕೊಂಡ ಹೋದುದರ ಕುರಿತು ರಿಯಾ ಹೇಳಿದರು- ಶೈವಿಕ್-ಶುಶಾಂತ್‍ರ ನಡುವೆ ಸಂಬಂಧವಿತ್ತು. ನಾವು ಮೂವರು ಸೇರಿ ಒಂದು ಕಂಪೆನಿ ಹುಟ್ಟು ಹಾಕಿದ್ದೆವು. ಇದರ ಹೆಸರು ರಿಯಲಿಸ್ಟಿಕ್ ಎಂದಾಗಿತ್ತು. ಇದು ಸುಶಾಂತ್‍ರ ಕನಸಿನ ಯೋಜನೆಯಾಗಿತ್ತು. ಇದರಲ್ಲಿ ತಾನು, ತನ್ನ ಸಹೋದರ ಮತ್ತು ಸುಶಾಂತ್ ಮೂವರೂ ಪಾಲುದಾರರಾಗಿದ್ದೆವು. ಇದಕ್ಕಾಗಿ ಮೂವರಿಗೆ ತಲಾ 33,000 ರೂಪಾಯಿ ಕೊಡಬೇಕಾಗಿತ್ತು. ನನ್ನ ಸಹೋದರನ ಹಣವನ್ನು ನನ್ನ ಖಾತೆಯಿಂದ ಕೊಟ್ಟಿದ್ದೆ.

ಆದರೆ ಸುಶಾಂತ್ ಕುಟುಂಬ ಸುಶಾಂತ್‍ರ ಹಣದಿಂದ ನೀವು ಖರ್ಚು ಮಾಡುತ್ತಿದ್ದಿರಿ ಎಂದು ಆರೋಪಿಸಿದೆ ಎಂದಾಗ “ನಾನು ಸುಶಾಂತ್‍ರ ಹಣದಿಂದ ಬದುಕುತ್ತಿರಲಿಲ್ಲ. ನಾವು ಒಂದು ಜೋಡಿಯಂತೆ ಬದುಕುತ್ತಿದ್ದೆವು. ಸುಶಾಂತ್‍ರ ಜೀವನ ಶೈಲಿ ತುಂಬ ಖರ್ಚಿನದ್ದಾಗಿತ್ತು. ಇದರಿಂದ ನಾನು ತುಂಬ ಆತಂಕಗೊಂಡಿದ್ದೆ. ಸುಶಾಂತ್ ಕೆಲವು ಸಮಯದ ಮೊದಲು ತನ್ನ ಗೆಳೆಯರ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಸುಶಾಂತ್ 70 ಲಕ್ಷ ರೂಪಾಯಿ ಖರ್ಚು ಮಾಡಿದರು. ಚಾರ್ಟೆಡ್ ವಿಮಾನವನ್ನು ಬುಕ್ ಮಾಡಿದ್ದರು. ಅವರು ರಾಜರಂತಹ ಜೀವನ ನಡೆಸಲು ಬಯಸುತ್ತಿದ್ದರು ಎಂದು ರಿಯಾ ಹೇಳಿದರು.

ಸುಶಾಂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯ ಕುರಿತು ಹಲವು ರೀತಿಯ ವಿಷಯಗಳು ಹೊರ ಬಂದಿವೆ. ಇತ್ತೀಚೆಗೆ ಸುಶಾಂತ್‍ನ ಮನೆಯಿಂದ ಹೊರ ಬಂದ ಬಳಿಕ ರಿಯಾ ಐಟಿ ಪ್ರೊಫೆಶನಲ್ ಒಬ್ಬರ ಮೂಲಕ 8 ಹಾರ್ಡ್ ಡಿಸ್ಕ್ ಡಾಟ ಡಿಲಿಟ್ ಮಾಡಿಸಿದ್ದರು. ಈಗ ಸಿಬಿಐ ತನಿಖೆ ನಡೆಸುತ್ತಿದ್ದು, ಈ ಐಟಿ ವ್ಯಕ್ತಿಯನ್ನು ಅದು ಪತ್ತೆ ಹಚ್ಚಲಿದೆ. ಅದರೊಳಗೆ ಏನೆಲ್ಲ ಇತ್ತು ಎಂದು ಸಿಬಿಐ ತಿಳಿದು ಕೊಳ್ಳಬಹುದು. ಇದಲ್ಲದೆ ಇಡಿ ಮತ್ತು ಸಿಬಿಐ ರಿಯಾ ಸಹಿತ ಇತರ ಐವರ ವಿರುದ್ಧ ಕೇಸು ದಾಖಲಿಸಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌  ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.