ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 27: ಜೀವಂತವಾಗಿ ಬೆಂಕಿ ಕೊಡುವಾಗ ನನಗೆ ಏನು ಮಾಡಲಾಗುತ್ತಿದೆ ಎಂದು ತಿಳಿಯದೆ ಮೆಹ್ತಾಬ್ ನಗುತ್ತಿರಬಹುದು. ಆ ಮುಖವನ್ನು ತಲವಾರಿನಿಂದ ಹೀಗೆ ಸಿಗಿಯಲಾಯಿತು ಎಂದು ಸ್ಟ್ರೆಚ್ಚರ್ ನಲ್ಲಿರುವ ದೇಹವನ್ನು ತೋರಿಸಿ ಸಹೋದರನ ಪತ್ನಿ ಯಾಸ್ಮಿನ್ ಅತ್ತಿದ್ದಾರೆ. ಇದುವರೆಗೆ ಯಾರೊಂದಿಗೂ ಜಗಳವಾಡಿದವನಲ್ಲ. 22 ವರ್ಷ ಆದರೂ ಮಕ್ಕಳಂತಿದ್ದ. ನನಗೆ ಅವನು ಸ್ವಂತ ಮಗನಂತೆ ಎಂದು ಯಾಸ್ಮಿನ್ ಅತ್ತರು.
ಮಾನಸಿಕ ಬೆಳವಣಿಗೆ ಕುಂಠಿತವಾದ ಒಬ್ಬನೊಂದಿಗೆ ಹೀಗೆ ವರ್ತಿಸಲು ಮನುಷ್ಯರಾಗಿ ಹುಟ್ಟಿದವರಿಗೆ ಸಾಧ್ಯವೇ ಎಂದು ಮೆಹ್ತಾಬ್ನ ಸಹೋದಿರ ಶಾಯಿರಾ ಬಾನು ಕೇಳೀ ಅತ್ತರು. ಅವನಿಗೆ ಯಾರೂ ತೊಂದರೆ ನೀಡಲಾರರು ಎಂದು ಮನೆಯವರಿಗೆ ವಿಶ್ವಾಸವಿತ್ತು. ಅಲ್ಲೆಲ್ಲ ನಡೆಯುವ ಗಲಭೆಯನ್ನು ಅರಿತುಕೊಳ್ಳಲು ಅವನಿಂದ ಸಾಧ್ಯವಿಲ್ಲ ತಾನೆ. ಮುಸ್ತಫಾಬಾದಿನ ಸಮಸ್ಯೆ ಗೊತ್ತಿಲ್ಲದೆ ಚಾ ಕುಡಿಯಲು ಮನೆಯಿಂದ ಹೊರಬಂದವನು ಮತ್ತೆ ಹಿಂದಿರುಗಲಿಲ್ಲ.
ರಸ್ತೆಗಳಲ್ಲಿ ಬ್ಯಾರಿಕೇಡ್ಗಳಿವೆ, ಆಸ್ಪತ್ರೆಗೆ ಹೋಗಬೇಕಾದರೂ ಪೊಲೀಸರಿಗೆ ಕರೆ ಮಾಡಬೇಕು. ಪೊಲೀಸರಿಗೆ ಕರೆ ಮಾಡಿ ಬೆಳಗ್ಗಿನವರೆಗೆ ಕಾದೆವು. ಬುಧವಾರ ಬೆಳಗ್ಗೆ ಬಂದ ಆಂಬುಲೆನ್ಸಿನಲ್ಲಿ ಮೃತಹೇಹವನ್ನು ಜಿಟಿಬಿ ಆಸ್ಪತ್ರೆಗೆ ಕೊಂಡು ಹೋಗಲಾಯಿತು. ಅಲ್ಲಿ ಮೋರ್ಚರಿ ತುಂಬಿತ್ತು. ಅಲ್ಲಿಂದ ಲೋಕನಾಯಕ ಆಸ್ಪತ್ರೆಗೆ ಕೊಂಡು ಹೋಗಲಾಯಿತು. ಅಲ್ಲಿ ಗಂಟೆಗಟ್ಟಲೆ ಕಾದ ಬಳಿಕ ಜಿಟಿಬಿ ಆಸ್ಪತ್ರೆಗೆ ಮರಳಲು ಪೊಲೀಸರು ಹೇಳಿದರು. ಮೋರ್ಚರಿ ತುಂಬಿದೆ ಎಂದು ಇಲ್ಲಿಯೂ ಹೇಳಲಾಯಿತು. ಪುನಃ ಜಿಟಿಬಿ ಆಸ್ಪತ್ರೆಗೆ. ಅಧರೆ ಬುಧವಾರ ರಾತ್ರೆಯಾದರೂ ಮೃತದೇಹ ಪೋಸ್ಟ್ ಮಾರ್ಟಂ ಆಗಿ ಸಿಕ್ಕಿಲ್ಲ ಎಂದು ಶಾಯಿರಾ ಬಾನು ಹೇಳಿದರು.












