ಸನ್ಮಾರ್ಗ ವಾರ್ತೆ
ಜಿದ್ದ, ಫೆ. 27: ಕೊರೊನಾ ಹರಡುವ ಭೀತಿಯಲ್ಲಿ ಸೌದಿ ಅರೇಬಿಯ ಉಮ್ರಾ ಯಾತ್ರಾರ್ಥಿಗಳು ಮತ್ತು ಪ್ರವಾಸಿಗಳಿಗೆ ತಾತ್ಕಾಲಿಕ ನಿಷೇಧ ಹೇರಿದೆ. ಉಮ್ರಕ್ಕಾಗಿ ಮಕ್ಕ ಮದೀನಾ ಪ್ರವೇಶಿಸದಂತೆ ಸೌದಿ ವಿದೇಶ ಸಚಿವಾಲಯ ನಿಷೇಧ ಹೇರಿದೆ. ಕೊರೊನಾ ದೃಢಗೊಂಡಿರುವ ದೇಶಗಳಿಂದ ಪ್ರವಾಸಿಗಳಿಗೂ ನಿಷೇಧವಿದೆ. ನಂತರ ಕೇರಳದ ವಿಮಾನ ನಿಲ್ದಾಣದಿಂದ ಉಮ್ರಾ ಯಾತ್ರಿಕರನ್ನು ಸ್ಪೈಸ್ ಜೆಟ್ ಕೆಳಗಿಳಿಸಿತು. ಸೌದಿಯಲ್ಲಿರುವ ಜಿಸಿಸಿ ದೇಶಗಳ ಜನರು ಸೌದಿ ಅರೇಬಿಯ ಪ್ರವೇಶಕ್ಕೆ ನಿಯಂತ್ರಣ ವಿಧಿಸಲಾಗಿದೆ.
ಇದೇ ವೇಳೆ, ಕೊರೊನಾ ವೈರಸ್ ಪೀಡಿತರ ವಿಷಯದಲ್ಲಿ ಪ್ರಗತಿಯನ್ನು ನೋಡುತ್ತಿದ್ದೇವೆ. ಕೊರೊನಾ ಎದುರಿಸಲು ದೇಶಗಳು, ಸಂಘಟನೆಗಳು ಮಾಡುತ್ತಿರುವ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಸೌದಿ ಅರೇಬಿಯ ಹೇಳಿಕೆ ಬಿಡುಗಡೆಗೊಳಿಸಿದೆ.












