ಸನ್ಮಾರ್ಗ ವಾರ್ತೆ
ಬೆಂಗಳೂರು,ಜು.19: ರಾಜ್ಯವ್ಯಾಪಿ ಲಾಕ್ಡೌನ್ ಸಂದರ್ಭದಲ್ಲಿಯೂ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು 812 ಮಂದಿ ಅಪಘಾತದಲ್ಲಿ ಬಲಿಯಾಗಿರುವುದಾಗಿ ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.
ಅಂತರ್ ರಾಜ್ಯ ರಸ್ತೆಗಳಲ್ಲಿ ಸಂಭವಿಸಿದ್ದ ಅಪಘಾತಗಳಲ್ಲಿ 281 ಮಂದಿ ಹಾಗೂ ಅಂತರ್ ಜಿಲ್ಲಾ ಸಂಚಾರ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ 241 ಮಂದಿ ಮತ್ತು ಇತರೆ ರಸ್ತೆಗಳಲ್ಲಿನ ಅಪಘಾತಗಳಲ್ಲಿ 290 ಜನರು ಅಸುನೀಗಿದ್ದಾರೆ. ಹಾಗೂ ಒಟ್ಟು 3691 ಮಂದಿ ಗಾಯಗೊಂಡಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












