ಅಗ್ನಿಪಥ್| ಭಾರತದಲ್ಲಿ ನಾಜಿ ಆಡಳಿತಕ್ಕೆ ನಾಂದಿ; ಇದು ಆರೆಸ್ಸೆಸ್ ತಂತ್ರ: ಕುಮಾರಸ್ವಾಮಿ ಆರೋಪ

0
210

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೇಂದ್ರ ಸರಕಾರದ ವಿವಾದ ಸೈನಿಕ ಯೋಜನೆ ಅಗ್ನಿಪಥ್ ಅನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಭಾರತದಲ್ಲಿ ನಾಜಿ ಆಡಳಿತ ಆರಂಭಿಸಲು ಮತ್ತು ಸೇನೆಯನ್ನು ತನ್ನ ನಿಯಂತ್ರಣಕ್ಕೊಳಪಡಿಸಲು ಆರಸ್ಸೆಸ್ ಹಿಡನ್ ಅಜೆಂಡ ಅಗ್ನಿಪಥ್ ಎಂದು ಅವರು ಆರೋಪಿಸಿದ್ದಾರೆ.

ಸೇನೆಯೊಳಗೆ ಮತ್ತು ಹೊರಗೆ ಅವರ ಸೇವೆ ಕೊನೆಗೊಂಡರು ಅಗ್ನಿವೀರರು ಆರದ‌ಎಸ್‌ಎಸ್ ಕಾರ್ಯಕರ್ತರಾಗಲಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು. ಆರೆಸ್ಸೆಸ್ ನಾಯಕರು ಅವರನ್ನು ನೇಮಿಸುವರೆ ಅಥವಾ ಸೇನೆ ನೇಮಿಸುತ್ತಿದೆಯೇ? ಹತ್ತು ಲಕ್ಷ ಮಂದಿಯನ್ನು ನೇಮಕಗೊಳಿಸುವಾಗ ಖಂಡಿತವಾಗಿಯೂ ಆರೆಸ್ಸೆಸ್ ಕಾರ್ಯವಾಹ್‍ಗಳನ್ನು ಅವರು ಸೇನೆಗೆ ತುರುಕುತ್ತಾರೆ. ಹೀಗೆ ಅವರಿಗೆ 2.6 ಲಕ್ಷ ಆರೆಸ್ಸೆಸ್ ಕಾರ್ಯಕರ್ತರನ್ನು ಸೈನ್ಯದಲ್ಲಿ ಸಜ್ಜುಗೊಳಿಸಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಹನ್ನೊಂದು ಲಕ್ಷ ರೂಪಾಯಿ ಕೊಟ್ಟು ಹೊರಗೆ ಹಾಕುತ್ತಾರೆ. ಅದರೊಂದಿಗೆ ಅವರು ಇಡೀ ದೇಶದಲ್ಲಿ ಆರ್‌ಎಸ್‌ಎಸ್‌ನವರು ವ್ಯಾಪಿಸುತ್ತಾರೆ ಎಂದುಕುಮಾರ ಸ್ವಾಮಿ ಹೇಳಿದರು.

ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಜರ್ಮನಿಯ ಹಿಟ್ಲರ್ ಮತ್ತು ನಾಜಿಸಮ್ ಆಡಳಿತ ನಡೆಯುವ ಸಮಯದಲ್ಲಿ ಆರೆಸ್ಸೆಸ್ ರೂಪಿಸಲಾಗಿತ್ತು ಎಂದು ಕುಮಾರಸ್ವಾಮಿ ನೆನಪಿಸಿದ್ದಾರೆ. ನಮ್ಮ ದೇಶದಲ್ಲಿ ನಾಝಿ ಆಡಳಿತ ಜಾರಿಗೊಳಿಸುವುದು ಅವರ ಯೋಜನೆಯಾಗಿದೆ. ಅದಕ್ಕಾಗಿ ಅಗ್ನಿಪಥ್ ಅಲ್ಲದಿದ್ದರೆ ಅಗ್ನಿವೀರರನ್ನು ಸೃಷ್ಟಿಸಲಾಗುತ್ತಿದೆ. ಯೋಜನೆಯ ಕುರಿತು ತನ್ನಲ್ಲಿ ಕೆಲವು ಸಂದೇಹಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.