ಸನ್ಮಾರ್ಗ ವಾರ್ತೆ
ಅಲಹಾಬಾದ್, ಮಾ. 12: ಪೌರತ್ವ ತಿದ್ದು ಪಡಿ ಕಾನೂನು ವಿರುದ್ಧ ಭಾಗವಹಿಸಿದವರ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದಶಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರಕಾರವನ್ನು ಸುಪ್ರೀಂಕೋರ್ಟು ತೀವ್ರ ತರಾಟೆಗೆತ್ತಿಕೊಂಡಿದ್ದು. ಬಂಧಿಸಿದವರ ಫೋಟೊ, ವಿಳಾಸ ಬಹಿರಂಗವಾಗಿ ಹಾಕಿದ್ದು ಕಾನೂನು ಬಾಹಿರವಾಗಿದೆ ಎಂದಿದೆ. ಯಾವ ಕಾನೂನಿನ ಆಧಾರದಲ್ಲಿ ಹೀಗೆ ಹಾಕಿದ್ದೀರಿ. ರಾಜ್ಯಸರಕಾರದ ಈ ಕ್ರಮಕ್ಕೆ ಕಾನೂನಿನ ಸಮರ್ಥನೆಗಳಿಲ್ಲ ಎಂದು ಸುಪ್ರೀಂಕೋರ್ಟು ಹೇಳಿತು. ಕಾನೂನು ವಿರುದ್ಧ ಚಟುವಟಿಕೆ ಮಾಡಿದವರ ವಿರುದ್ಧ ಕೇಸು ಹಾಕುವುಕ್ಕಿಂತ ಆಚೆಗಿನ ಪ್ರತೀಕಾರ ಮಾಡಲು ರಾಜ್ಯ ಸರಕಾರಗಳಿಗೆ ಅಧಿಕಾರವಿಲ್ಲ ಎಂದು ಜಸ್ಟಿಸ್ ಯು ಯು ಲಲಿತ್ ಬೆಟ್ಟು ಮಾಡಿದರು. ಬಂಧಿಸಿದವರ ಚಿತ್ರಗಳ ಪೋಸ್ಟರ್ ತೆಗೆಯಬೇಕೆಂದು ಅಲಹಾಬಾದ್ ಹೈಕೋರ್ಟು ಅಧೇಶಿಸಿತ್ತು. ಇದರ ವಿರುದ್ಧ ಯೋಗಿ ಸರಕಾರ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು.
ಪೋಸ್ಟರ್ ಳನ್ನು ಹಾಕಿದ ಸರಕಾರದ ಕ್ರಮ ಅನಗತ್ಯವಾಗಿದ್ದು ವ್ಯಕ್ತಿಗಳ ಖಾಸಗಿತ್ವದ ಹನನವಾಗಿದೆ ಎಂದು ಸುಪ್ರೀಂಕೋರ್ಟು ಹೇಳಿದೆ. ಲಕ್ನೊದಲ್ಲಿ ಮೃತಪಟ್ಟಿರುವ ಆರೋಪಿಗಳ ಸಹಿತ ಚಿತ್ರಗಳನ್ನು ಉತ್ತರ ಪ್ರದೇಶ ಸರಕಾರ ಪೋಸ್ಟರ್ ಹಾಕಿ ಪ್ರದರ್ಶಿಸಿತ್ತು. ಸಾಮಾಜಿಕ ಕಾರ್ಯಕರ್ತ ನದಾಫ್ ಜಾಫರ್, ವಕೀಲ ಮುಹಮ್ಮದ್ ಶುರೈಬ್, ನಟ ದೀಪಕ್ ಕಬೀತ್, ಮಾಜಿ ಐಪಿಎಸ್ ಅಧಿಕಾರಿ ಎಸ್. ಆರ್ ಧಾರಾಪುರಿಯವರ ಚಿತ್ರಗಳು ಅದರಲ್ಲಿ ಇದ್ದವು.












