ರಷ್ಯಾದಿಂದ ಜಗತ್ತಿನ ಮೊದಲ ತೇಲುವ ಅಣು ರಿಯಾಕ್ಟರ್ ಸ್ಥಾಪನೆ

0
499

ಸನ್ಮಾರ್ಗ ವಾರ್ತೆ

ಮಾಸ್ಕೊ,ಆ.24: ಜಗತ್ತಿನ ಮೊದಲ ಹರಿದಾಡುವ ಅಣು ರಿಯಾಕ್ಟರನ್ನು ರಷ್ಯಾ ಸ್ಥಾಪಿಸಿದೆ. ಆರ್ಟಿಕ್ ಬಂದರು ಮುರಮಾನ್‍ಸ್ಕಿಯಿಂದ ಅಣು ರಿಯಾಕ್ಟರ್ ಶುಕ್ರವಾರ ಪಯಣ ಆರಂಭಿಸಿದೆ ಹದಿಮೂರು ವರ್ಷದಲ್ಲಿ ಯೋಜನೆಯನ್ನು ರಷ್ಯ ಪೂರ್ತಿಗೊಳಿಸಿದೆ. ಇಂಧನ ತುಂಬಿದ ರಿಯಾಕ್ಟರ್, ಆರ್ಟಿಕ್ ಬಂದರು ಮುಮಾನ್‍ಸ್ಕಿಯಿಂದ ಪಯಣ ಆರಂಭಿಸಿದ್ದು 5000 ಕಿಲೊಮೀಟರ್ ದೂರದ ಈಶಾನ್ಯ ಸೈಬಿರಿಯಾಕ್ಕೆ ತಲುಪಲಿದೆ. ಸುಮಾರು 472 ಅಡಿ ಉದ್ದದ ರಿಯಾಕ್ಟರ್‍ಗೆ ಹದಿನೆಂಟನೆ ಶತಮಾನದ ರಷ್ಯನ್ ವಿಜ್ಞಾನಿ ಮತ್ತು ಕವಿಯ ಹೆಸರಿನಲ್ಲಿ ಅಕಾಡಮಿಕ್ ಲೊಮೊನೊಸೇವ್ ಎಂದು ಹೆಸರು ಇರಿಸಲಾಗಿದೆ.

ಚಿನ್ನದ ಗಣಿ ಇರುವ ಚುಕೊಟ್ಕದ ಖನನ ಸಮುಚ್ಚಯಕ್ಕೆ ವಿದ್ಯುತ್ ನೀಡುವುದು ರಿಯಾಕ್ಟರ್ ಉದ್ದೇಶವಾಗಿದೆ. ರಿಯಾಕ್ಟರ್ ವಿರುದ್ಧ ಪರಿಸರ ಕಾರ್ಯಕರ್ತರು ಬಲವಾದ ಆಕ್ಷೇಪ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಕಾರಣದಿಂದ ರಿಯಾಕ್ಟರ್ ಸ್ಫೋಟವಾದರೆ ಆರ್ಟಿಕ್ ಸಮುದ್ರದ ವಾಸ ವ್ಯವಸ್ಥೆ ಮತ್ತು ಜೀವಜಾಲಗಳ ಬೃಹತ್ ನಾಶ ಸಂಭವಿಸಬಹುದು ಎಂದು ಗ್ರೀನ್ ಪೀಸ್ ಮುನ್ನೆಚ್ಚರಿಕೆ ನೀಡಿದೆ. ಇದೇ ವೇಳೆ ರಿಯಾಕ್ಟರ್ ತೇಲುವ ಕಟ್ಟಡವಾಗಿದ್ದು ಅಪಾಯದ ಸಾಧ್ಯತೆ ಇಲ್ಲ ಎಂದು ನ್ಯೂಕ್ಲಿಯರ್ ಏಜೆನ್ಸಿ ರೊಸಾಟ್ ತಿಳಿಸಿದೆ.