ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ತಡೆಯಾಜ್ಞೆಯೂ ಇಲ್ಲ, ಸಂರಕ್ಷಣೆ ನೀಡಬೇಕೆಂದು ಹೇಳುವುದೂ ಇಲ್ಲ: ಸುಪ್ರೀಂಕೋರ್ಟು

0
467

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 13: ಶಬರಿಮಲೆಯಲ್ಲಿ ಯುವತಿಯರ ಪ್ರವೇಶಕ್ಕೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಯುವತಿಯರ ಪ್ರವೇಶದ ಕುರಿತು ಸುಪ್ರೀಂಕೋರ್ಟ್ ಪೀಠದ ತೀರ್ಪು ಬರುವವರೆಗೆ ಕಾಯಬೇಕು. ಕೊನೆಯ ತೀರ್ಪು ಅನುಕೂಲಕರವಾದರೆ ಯುವತಿಯರಿಗೆ ಸಂರಕ್ಷಣೆ ನೀಡಲಾಗುವುದು ಎಂದು ಸುಪ್ರೀಂಕೋರ್ಟು ತಿಳಿಸಿದೆ. ರಹನಾ ಫಾತಿಮಾ, ಬಿಂದು ಅಮ್ಮಿಣಿ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಈ ಸ್ಪಷ್ಟಣೆ ನೀಡಿದೆ.

ದೇವಸ್ಥಾನಕ್ಕೆ ಹೋಗಬಾರದೆಂದು ಹೇಳುವುದಿಲ್ಲ. ಆದರೆ, ಯುವತಿಯರಿಗೆ ಸಂರಕ್ಷಣೆ ನೀಡಬೇಕೆಂದೂ ಹೇಳಲಾಗುವುದಿಲ್ಲ. ಶಬರಿಮಲೆ ಯುವತಿ ಪ್ರವೇಶ ಸುಪ್ರೀಂಕೋರ್ಟಿನ ವಿಶಾಲ ಪೀಠಕ್ಕೆ ಒಪ್ಪಿಸಲಾಗಿದೆ. ಅದನ್ನು ಶೀಘ್ರದಲ್ಲಿ ರೂಪಿಸಲಾಗುವುದು. ಶಬರಿಮಲೆಯಲ್ಲಿ ಅಕ್ರಮವಾಗುವುದನ್ನು ಬಯಸುವುದಿಲ್ಲ. ತುಂಬ ಗಂಭೀರ ವಿಷಯ ಇದು. ಸ್ಫೋಟನಾತ್ಮಕ ಸ್ಥಿತಿ ಅಲ್ಲಿದೆ ಎಂದು ಅರ್ಜಿ ಪರಿಗಣಿಸಿದ ಚೀಫ್ ಜಸ್ಟಿಸ್‍ರನ್ನೊಳಗೊಂಡ ಮೂವರು ಸದಸ್ಯರ ಪೀಠ ತಿಳಿಸಿತು.

ಶಬರಿಮಲೆ ದರ್ಶನಕ್ಕೆ ಪೊಲೀಸ್ ಸಂರಕ್ಷಣೆ ನೀಡಬೇಕೆಂದು ಬಿಂದು ಅಮ್ಮಿಣಿ ಮತ್ತು ರಹನಾ ಅರ್ಜಿ ಸಲ್ಲಿಸಿದ್ದರು.