ಹೈದರಾಬಾದ್ ಸಫಾ ಬೈತುಲ್ ಮಾಲ್ ವತಿಯಿಂದ 33 ಮನೆಗಳ ಕೀಲಿಕೈ ಹಸ್ತಾಂತರ

0
667

ಶಾಮ್ಲಿ: ಉತ್ತರ ಪ್ರದೇಶದ ಶಾಮ್ಲಿ ಜಲ್ಲೆಯ ಕೈರಾನ ಎಂಬಲ್ಲಿ, ಗಲಭೆಗಳಲ್ಲಿ ಸಂತೃಸ್ತರಾಗಿ ತೀರಾ ದುಸ್ತರದಲ್ಲಿರುವ 33 ಕುಟುಂಬಗಳಿಗೆ ಅಚ್ಚುಕಟ್ಟಾದ ಮನೆಗಳನ್ನು “ಸಫಾ ಬೈತುಲ್ ಮಾಲ್ ಹೈದರಾಬಾದ್”ಇದರ ವತಿಯಿಂದ ನಿರ್ಮಿಸಿ ಕೀಲಿಕೈಗಳನ್ನು ಹಸ್ತಾಂತರಿಸಲಾಯಿತು.ಈ ಕುಟುಂಬಗಳು ಸೂರಿಲ್ಲದೇ ತೀರಾ ಸಂಕಷ್ಟದಲ್ಲಿ ಜೀವಿಸುತ್ತಿದ್ದರು.ಹತ್ತು ಹಲವು ಸಂಕಷ್ಟಗಳಿಂದ ತತ್ತರಿಸಿರುವ ಈ ಪರಿಸರದ ಜನತೆಗೆ ಸರಕಾರವಾಗಲೀ ಇನ್ನಿತರ ಸಂಘಸಂಸ್ಥೆಗಳಾಗಲೀ ಇದುವರೆಗೆ ಸ್ವಂತ ಸೂರಿನ ಬಗ್ಗೆ ಯಾವುದೇ ತರಹದ ಸ್ಪಂದನೆಯನ್ನು ನೀಡಲಿಲ್ಲ.

ಕೆಲವೇ ದಿನಗಳ ಹಿಂದೆ ಸಫಾ ಬೈತುಲ್ ಮಾಲ್ ಹೈದರಾಬಾದ್ ಇದರ ಸ್ಥಾಪಕರಾದ ಜನಾಬ್ ಹಝ್ರತ್ ಮೌಲಾನಾ ಗಯಾಸುದ್ದೀನ್ ರಶಾದಿ ಯವರು ಇಲ್ಲಿಗೆ ಭೇಟಿ ನೀಡಿದ್ದರು. ಈ ಕುಟುಂಬಗಳಿಗೆ ಹೇಗಾದರೂ ಮಾಡಿ ಮನೆಗಳನ್ನು ನಿರ್ಮಿಸಲೇಬೇಕು ಎಂಬ ದೃಢ ನಿರ್ಧಾರದೊಂದಿಗೆ ಹೈದರಾಬಾದ್ ಗೆ ಬಂದಿದ್ದರು. ಅಲ್ ಹಮ್ದುಲಿಲ್ಲಾಹ್ ಇಂದು ಆ ಸುದಿನಗಳು ಬಂದಿವೆ ಎಂದು ಮೌಲಾನರವರು ಕೀಲಿಕೈ ಹಸ್ತಾಂತರಿಸುತ್ತಾ ಹೇಳಿದರು. ಇದಕ್ಕಾಗಿ ಕೇರಾನಾ ಎಂಬ ಪ್ರದೇಶದ ಹತ್ತಿರ ಮನೆಗಳ ನಿರ್ಮಾಣಕ್ಕಾಗಿ 6 ಎಕ್ರೆ ಜಮೀನನ್ನು ಖರೀದಿಸಿದ್ದೆವು.ಒಟ್ಟು 100 ಮನೆಗಳ ನಿರ್ಮಾಣದ ಗುರಿ ಇದೆ. ಇದೀಗ 33 ಮನೆಗಳು ಸಂಪೂರ್ಣಗೊಂಡಿವೆ. ಅದನ್ನು ಸಂತೃಸ್ತರಿಗೆ ಹಸ್ತಾಂತರಿಸುತ್ತಿದ್ದೇವೆ. ಬಾಕಿ ಉಳಿದ ಮನೆಗಳನ್ನು ಅತೀ ಶೀಘೃವಾಗಿ ಪೂರ್ತಿಗೊಳಿಸುತ್ತೇವೆ ಎಂದರು. ಈ ಮನೆಗಳ ನಿರ್ಮಾಣದಲ್ಲಿ ಸರಕಾರದಿಂದ ಯಾವುದೇ ತರಹದ ಆರ್ಥಿಕ ಸೌಲಭ್ಯಗಳು ನಮಗೆ ಸಿಗಲಿಲ್ಲ. ನಮ್ಮ ಸಂಸ್ಥೆ ಸಂಪೂರ್ಣವಾಗಿ ಸರಕಾರೇತರ ಸಂಸ್ಥೆಯಾಗಿದೆ. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ನಮಗೆ ಸಂಭಂಧವಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಹಝ್ರತ್ ಮೌಲಾನಾ ಮಹ್ಫೂಝುರ್ರಹ್ಮಾನ್ ರವರು, ಮನೆಗಳನ್ನು ಪಡೆಯುವವರ ವಿವರಗಳನ್ನು ಹೇಳಿದರು. ಸಫಾ ಬೈತುಲ್ ಮಾಲ್ ನ ಕಾರ್ಯಕಲಾಪಗಳು ಹಾಗೂ ಇದರ ಸಮಾಜ ಸೇವೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ವರದಿ:ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ,ಕಾರ್ಕಳ.