ಒಮಾನ್| ಫ್ಯಾಮಿಲಿ ವಿಸಿಟ್ ವೀಸಾ ಕನಿಷ್ಠ ವೇತನ ದರದಲ್ಲಿ ಭಾರೀ ಇಳಿಕೆ

0
1070

ಮಸ್ಕತ್: ಫ್ಯಾಮಿಲಿ ವಿಸಿಟ್ ವೀಸಾದಲ್ಲಿ ತಮ್ಮ ಕುಟುಂಬವನ್ನು ಕರೆಸಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಒಮಾನ್ ಸಿಹಿ ಸುದ್ದಿ ನೀಡಿದೆ. ಫ್ಯಾಮಿಲಿ ವೀಸಾ ಪಡೆಯಲು ನಿರ್ಬಂಧಿಸಲಾಗಿದ್ದ ಕನಿಷ್ಟ ವೇತನ ದರವನ್ನು 150 ರಿಯಾಲ್‌ಗಳಿಗೆ ಇಳಿಕೆ ಮಾಡುವ ಮಹತ್ವದ ನಿರ್ಧಾರವನ್ನು ಒಮಾನ್ ಕೈಗೊಂಡಿರುವುದಾಗಿ ವರದಿಯಾಗಿದೆ‌.

ಈ ಬಗ್ಗೆ ದೃಢೀಕರಿಸಿದ ರಾಯಲ್ ಒಮಾನ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು, ಪ್ಯಾಮಿಲಿ ವೀಸಾಗಳ ವೇತನದ ಮಿತಿಯನ್ನು 50%ಕ್ಕಿಂತ ಹೆಚ್ಚು ಇಳಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಕನಿಷ್ಠ 350 ರಿಯಾಲ್‌ಗಳ ಸಂಬಳವನ್ನು ಪಡೆಯುವವರು ಮಾತ್ರ ಫ್ಯಾಮಿಲಿ ವೀಸಾದಲ್ಲಿ ತಮ್ಮ ಕುಟುಂಬವನ್ನು ಒಮಾನ್‌ಗೆ ಕರೆತರಲು ಸಾಧ್ಯವಾಗುತ್ತಿತ್ತು. ಈ ಯೋಜನೆ ಯಾವಾಗ ಜಾರಿಗೆ ಬರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದ್ದು, ಹೊಸ ನಿರ್ಧಾರದಿಂದ ದೇಶದ ಸಂಪತ್ತು ಮತ್ತು ಉದ್ಯಮಕ್ಕೆ ಉತ್ತೇಜನ ಸಿಗಲಿದೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.