ಛತ್ತೀಸ್‌ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಸಂಘ ಪರಿವಾರದಿಂದ ದಾಳಿ: ಸನ್ಯಾಸಿನಿಯರನ್ನೇ ಬಂಧಿಸಿ ಪ್ರಕರಣ ದಾಖಲಿಸಿದ ಪೊಲೀಸರು

0
476

ಸನ್ಮಾರ್ಗ ವಾರ್ತೆ

ಛತ್ತೀಸ್‌ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಭಯಾನಕವಾಗಿ ನಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಯಾಗಿರುವ ಫಾದರ್ ಸಾಬು ಜೋಸೆಫ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅವರನ್ನು ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸಲಾಯಿತು, ಅವರ ಬ್ಯಾಗಿನಿಂದ ಬೈಬಲನ್ನು ಎತ್ತಿ ಎಸೆಯಲಾಯಿತು ಎಂದು ಅವರು ಹೇಳಿದ್ದಾರೆ. ಮಾತ್ರ ಅಲ್ಲ ಈ ಸನ್ಯಾಸಿನಿಯರನ್ನು ಪೊಲೀಸರು ಬಂಧಿಸಿದ್ದು ಇವರ ವಿರುದ್ಧ ಕನಿಷ್ಠ 10 ವರ್ಷಗಳವರೆಗೆ ಶಿಕ್ಷೆಯಾಗಬಹುದಾದ ಸೆಕ್ಷನ್ ಅಡಿ ಕೇಸು ದಾಖಲಿಸಲಾಗಿದೆ. ಮಾನವ ಕಳ್ಳ ಸಾಗಾಣಿಕೆ, ಮತಾಂತರ ಆರೋಪವನ್ನು ಕೂಡ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.

ತೀವ್ರ ಬಲಪಂಥೀಯ ನಾಯಕ ಜ್ಯೋತಿ ಶರ್ಮಾ ನೇತೃತ್ವದಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಭೀತಿಯನ್ನ ಸೃಷ್ಟಿಸಿದರು. ಪೊಲೀಸರ ಮುಂದೆಯೇ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರು. ದೌರ್ಜನ್ಯ ನಡೆಸುವುದಾಗಿ ಸನ್ಯಾಸಿಯರಿಗೆ ಬೆದರಿಕೆ ಒಡ್ಡಿದ್ರು. ನಿಂದನೆಯ ಬೈಗುಳಗಳನ್ನು ಸುರಿಸಿದ್ರು. ಬೈಬಲ್ ಸಹಿತ ಬ್ಯಾಗ್ ನಲ್ಲಿ ಇದ್ದ ವಿವಿಧ ವಸ್ತುಗಳನ್ನು ಕಿತ್ತು ಎಸೆದರು. ಈ ಕಾರ್ಯಕರ್ತರ ಒತ್ತಡದ ಮೇರೆಗೆ ಪೊಲೀಸರು ಈ ಸನ್ಯಾಸಿನಿಯರ ವಿರುದ್ಧವೇ ಪ್ರಕರಣ ದಾಖಲಿಸಿ ಬಂಧಿಸಿದರು ಎಂದು ಅವರು ಹೇಳಿದ್ದಾರೆ.

ಕ್ರೈಸ್ತರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ತಮ್ಮ ಸ್ವಂತ ಮನೆಯಲ್ಲೂ ಒಟ್ಟು ಸೇರಿ ಪ್ರಾರ್ಥನೆ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾರ್ಥನೆ ನಡೆಸುವಾಗ ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಆಕ್ರಮಣ ನಡೆಸುತ್ತಾರೆ. ಇವರನ್ನು ಬೆಂಬಲಿಸುವ ರೀತಿಯಲ್ಲಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಫಾದರ್ ಜೋಸೆಫ್ ಹೇಳಿದ್ದಾರೆ.

ಮತಾಂತರ ನಡೆಸುವುದಕ್ಕಾಗಿ ಹೆಣ್ಣು ಮಕ್ಕಳನ್ನು ಕೊಂಡು ಹೋಗುತ್ತಿದ್ದಾರೆ ಎಂದು ಹೇಳಿ ಈ ಸನ್ಯಾಸಿನಿಯರ ಮೇಲೆ ದಾಳಿ ನಡೆಸಲಾಗಿದೆ.