ಸನ್ಮಾರ್ಗ ವಾರ್ತೆ
ದುಬೈ ಪೊಲೀಸ್ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿ ಮಹಿಳಾ ಬ್ರಿಗೇಡಿಯರನ್ನು ನೇಮಿಸಲಾಗಿದೆ. ಕರ್ನಲ್ ಸಾಮಿರಾ ಅಲ್ ಅಲಿ ಅವರು ಮೊಟ್ಟಮೊದಲ ಮಹಿಳಾ ಬ್ರಿಗೇಡಿಯರ್ ಆಗಿ ನೇಮಕವಾಗಿದ್ದಾರೆ. ದುಬೈ ಪೊಲೀಸ್ ವ್ಯವಸ್ಥೆ ಸ್ಥಾಪನೆಯಾಗಿ 69 ವರ್ಷಗಳ ಬಳಿಕ ಈ ಬದಲಾವಣೆ ನಡೆದಿದೆ.
ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಮಂತ್ರಿಯಾಗಿರುವ ದುಬೈ ಆಡಳಿತಗಾರ ಶೈಕ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರ ನಿರ್ದೇಶನದ ಪ್ರಕಾರ ಸಾಮಿರಾ ಅಲಿ ಅವರನ್ನು ಬ್ರಿಗೇಡಡಿಯರ್ ಆಗಿ ನೇಮಕಗೊಳಿಸಲಾಗಿದೆ.
ದುಬೈ ಪೋಲಿಸ್ ನ ಎಲ್ಲಾ ಮಹಿಳಾ ಸದಸ್ಯರಿಗೂ ಇದು ಹೆಮ್ಮೆ ಮತ್ತು ಸಂತೋಷದ ಸಂದರ್ಭವಾಗಿದೆ ಎಂದು ಸಾಮಿರಾ ಹೇಳಿದ್ದಾರೆ.
ಯು ಏ ಇ ಯೂನಿವರ್ಸಿಟಿಯಿಂದ ಪದವಿ ಪಡೆದ ಬಳಿಕ 1994ರಲ್ಲಿ ಸಾಮಿರ ಅಲಿ ಅವರು ದುಬೈ ಪೊಲೀಸ್ ವ್ಯವಸ್ಥೆಯ ಭಾಗವಾದರು. ಇವರಿಗೆ ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಅನುಭವವಿದೆ.












