ಮೋದಿಯನ್ನು ಔರಂಗಬ್‌ಗೆ ಹೋಲಿಸಿದ ಸಂಜಯ್ ರಾವತ್

0
393

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರು ಔರಂಗಝೆಬ್ ಗೆ ಹೋಲಿಸಿದ್ದಾರೆ. ಪ್ರಧಾನಿಯನ್ನು ಅಘೋರಿ ಎಂದು ಕರೆದ ರಾವತ್ ಅವರ ಹೇಳಿಕೆಗೆ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿದೆ.

ಈ ಮಣ್ಣು ನೆಹರು ಇಂದಿರಾಗಾಂಧಿ ಶಾಸ್ತ್ರಿ ನರಸಿಂಹರಾವ್ ರಾಜೀವ್ ಗಾಂಧಿ ಅಂಬೇಡ್ಕರ್ ಮತ್ತು ಬಾಳಾ ಠಾಕರೇ ಯಂಥ ಮಹಾನ್ ನಾಯಕರಿಗೆ ಜನ್ಮ ನೀಡಿದೆ. ಆದರೆ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ನನಗೆ ಚಿಂತೆ ಆಗ್ತಾ ಇದೆ.. ಅದೇ ಮಣ್ಣು ಔರಂಗ ಝೆಬ್ ನಂತಹ ವ್ಯಕ್ತಿಗೆ ಜನ್ಮ ನೀಡಿದೆ ಎಂದು ರಾವತ್ ಹೇಳಿದ್ದಾರೆ.

ಔರಂಗಜೇಬ್ ಗುಜರಾತಿನಲ್ಲಿ ಜನಿಸಿದರು ಎಂದು ಅವರು ಹೇಳಿದ್ದಾರೆ. ಭಾರತೀಯ ರಾಜಕೀಯದಲ್ಲಿ ಅವರಂಥವರು ಯಾರೂ ಹುಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಮಧ್ಯೆ ಸಂಜಯ್ ರಾವತ್ ಅವರ ಹೇಳಿಕೆಗೆ ಬಿಜೆಪಿ ತೀವ್ರ ತಿರುಗೇಟು ನೀಡಿದೆ. ಚುನಾವಣೆಯಲ್ಲಿ ಪ್ರಧಾನಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸಂಜಯ್ ರಾವತ್ ಅವರು ಪ್ರಧಾನಿಯನ್ನು ಅವಮಾನಿಸ್ತಾ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಉದ್ದವ್ ಠಾಕ್ರೆ ಅವರ ಪಕ್ಷದ ಸಂಸದರು ಏಕನಾಥ ಶಿಂಧೆ ಅವರ ಬಣಕ್ಕೆ ಪಕ್ಷಾಂತರಗೊಳ್ಳುವ ಸಾಧ್ಯತೆ ಇದೆ ಎಂಬ ವರದಿಗಳ ಮಧ್ಯೆ ಈ ರಾಜಕೀಯ ವಿವಾದ ಉಂಟಾಗಿದೆ.