ಸಂಜಯ್ ರಾವುತ್ ನ್ಯಾಯಾಂಗ ಬಂಧನ ವಿಸ್ತರಣೆ

0
493

ಸನ್ಮಾರ್ಗ ವಾರ್ತೆ

ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಸಂಸದ ಸಂಜೀವ್ ರಾವುತ್‌ರವರ ನ್ಯಾಯಾಂಗ ಬಂಧನವನ್ನು ಸೆ.19ರವರೆಗೆ ಮುಂಬಯಿ ವಿಶೇಷ ಕೋರ್ಟು ವಿಸ್ತರಿಸಿದೆ.

ಇದುವರೆಗೆ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ಅವರ ವಕೀಲರು ಸೋಮವಾರ ಕೋರ್ಟಿಗೆ ತಿಳಿಸಿದ್ದಾರೆ. ನ್ಯಾಯಾಂಗ ಬಂಧನ ವಿಸ್ತರಿಸಬೇಕೆಂದು ಇಡಿ ಕೋರ್ಟಿಗೆ ಮನವಿ ಮಾಡಿಕೊಂಡಿತ್ತು. ಪಾರ್ಲಿಮೆಂಟಿನ ಫಾರ್ಮುಗಳಿಗೆ ಸಹಿ ಹಾಕಲು ಕೋರ್ಟು ರಾವುತ್‍ರನ್ನು ಅನುಮತಿಸಿತ್ತು. ಅದರ ಪ್ರತಿಯನ್ನು ಕೋರ್ಟು ಇಡಿಗೆ ಹಾಜರು ಪಡಿಸಬೇಕೆಂದು ಸೂಚಿಸಿತ್ತು.

ಪತ್ರಾಚಾಲ್ ಭೂ ಹಗರಣದ ಪ್ರಕರಣದಲ್ಲಿ ಆರು ಗಂಟೆಗಳ ವಿಚಾರಣೆಯ ಬಳಿಕ ಆಗಸ್ಟ್ 1 ರಂದು ಸಂಜಯ್ ರಾವುತ್‍ರನ್ನು ಇಡಿ ಬಂಧಿಸಿತ್ತು. ದೊರಕಿದ ಸಾಕ್ಷ್ಯಗಳ ಆಧಾರದಲ್ಲಿ ಅಕ್ರಮ ಹಣ ಸಕ್ರಮ ಮಾಡುವುದನ್ನು ನಿಷೇಧಿಸುವ ಕಲಂ ಪ್ರಕಾರ ಶಿಕ್ಷಿಸಲ್ಪಡುವ ಅಪರಾಧ ರಾವತ್ ಮಾಡಿದ್ದಾರೆ ಎಂದು ಅಧಿಕಾರಿಗಳು ಬಂಧನ ಮೆಮೊದಲ್ಲಿ ಆರೋಪಿಸಿದ್ದರು.