ತೊಕ್ಕೊಟ್ಟು: ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆ ಖಂಡಿಸಿ ವೆಲ್ಫೇರ್ ಪಾರ್ಟಿ ಮಹಿಳಾ ಘಟಕದಿಂದ ಪ್ರತಿಭಟನೆ

0
372

ಸನ್ಮಾರ್ಗ ವಾರ್ತೆ

ತೊಕ್ಕೊಟ್ಟು: ಬಿಲ್ಕೀಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆ ಖಂಡಿಸಿ ಸೋಮವಾರ ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ವಿಭಾಗ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆಯಾದ ಮರ್ಯಮ್ ಶಹೀರಾ, ಹಿರಾ ಕಾಲೇಜು ಅಧ್ಯಾಪಕಿ ಆಯಿಶಾ ತಬಸ್ಸುಮ್, ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, FITU ಕಾರ್ಮಿಕರ ಸಂಘಟನೆಯ ರಾಜ್ಯ ಹೊಣೆಗಾರಾದ ದಿವಾಕರ್ ಬೋಳೂರು, ವೆಲ್ಫೇರ್ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಡ್ವಕೇಟ್ ಸರ್ಫರಾಝ್, ಸಾಮಾಜಿಕ ಕಾರ್ಯಕರ್ತ ರಿಯಾಝ್ ,ರಾಜ್ಯ ಕಾರ್ಯದರ್ಶಿ ಮೊಯಿನುದ್ಧೀನ್ ಕಮರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸೈಫ್,  ದಕ್ಷಿಣ ಕನ್ನಡ ಮಹಿಳಾ ವಿಭಾಗದ ಸಂಚಾಲಕಿ ಮಮ್ತಾಜ್ ವಾಮಂಜೂರ್, ಕಾರ್ಯದರ್ಶಿ ಝೀನತ್ ಹಾಗೂ ಜಿಲ್ಲೆಯ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.