ಸಣ್ಣ ಸಂಸ್ಥೆಗಳಿಗೆ ಲೆವಿ (ಮಾಸಿಕ ತೆರಿಗೆ) ರಿಯಾಯಿತಿ: ಸೌದಿ ಕಾರ್ಮಿಕ ಸಚಿವಾಲಯದ ಮಹತ್ವದ ನಿರ್ಧಾರ

0
548

ರಿಯಾದ್, ಮಾ.22: ಸೌದಿ ಅರೇಬಿಯದಲ್ಲಿನ ಸಣ್ಣ ಸಂಸ್ಥೆಗಳಲ್ಲಿ ಕೆಲಸಮಾಡುವ ನಾಲ್ವರು ವಿದೇಶಿ ಕಾರ್ಮಿಕರಿಗೆ ಲೆವಿ ( ಮಾಸಿಕ ತೆರಿಗೆ) ಈಡು ಮಾಡುವುದಿಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಒಂಬತ್ತು ಮಂದಿಯವರೆಗೆ ಕೆಲಸಗಾರರು ಇರುವ ಸಂಸ್ಥೆಗೆ ಮಾತ್ರ ಈ ನಿಬಂಧನೆ ಅನ್ವಯವಾಗಲಿದೆ.

ಸಣ್ಣ ವ್ಯಾಪಾರ ಸಂಸ್ಥೆಗಳ ನಾಲ್ವರು ವಿದೇಶಿಗಳಿಗೆ ಲೆವಿ ಇಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಸಚಿವಾಲಯಕ್ಕೆ ನಿರಂತರ ಬಂದ ದೂರಿನ ಕೊನೆಯಲ್ಲಿ ಸಚಿವಾಲಯ ಹೊಸ ನಿಬಂಧನೆಯನ್ನು ಟ್ವಿಟರ್ ಮೂಲಕ ತಿಳಿಸಿದೆ.

ಒಂಬತ್ತು ಮಂದಿಯವರೆಗೆ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಬೇಕು. ಆದರೆ ಸಂಸ್ಥೆಯ ಮಾಲಕ ಕೂಡ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ನಿಬಂಧನೆಯಿದೆ. ಅಂದರೆ ಜನರಲ್ ಆರ್ಗನೈಝೇಶನ್ ಫಾರ್ ಸೋಶಿಯಲ್ ಇನ್ಸುರೆನ್ಸ್‍ನ (ಗೋಸಿ) ರಿಜಿಸ್ಟರ್ ಪ್ರಕಾರ ಸಂಸ್ಥೆಯ ಮಾಲಕನಾದ ಸ್ವದೇಶಿ ಅದೇ ಸಂಸ್ಥೆಯ ಕೆಲಸಗಾರ ಪಟ್ಟಿಯಲ್ಲಿ ಇರಬೇಕಾಗಿದೆ. ಕಾರ್ಮಿಕ ಸಚಿವಾಲಯದ ನಿರ್ಧಾರ ಹೊಸದಾಗಿ ಆರಂಭವಾಗುವ ಸಂಸ್ಥೆಗೆ ಪ್ರಯೋಜನಕರವಾಗಲಿದೆ.