ಅಸ್ಸಾಮ್ NRC ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದ ಎಸ್‌ಐಒ: ಅಜರುದ್ದೀನ್ ಪಿಲಕೋಡನ್ ನಿರ್ದೇಶನದಲ್ಲಿ ಮೂಡಿಬಂದಿದೆ “ಸ್ಟೇಟ್ ಲೆಸ್”; ವೀಡಿಯೊ

0
1432

ಸನ್ಮಾರ್ಗ ವಾರ್ತೆ-

ಈ ವರ್ಷ ಜುಲೈ 8 ರಂದು ಅಸ್ಸಾಂನ ಸುನ್ಬಾರಿ ಗ್ರಾಮದ 59 ವರ್ಷದ ಅಂಬರ್ ಅಲಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಅಂಬರ್ ಅವರ ಸಾವಿಗೆ ಭಾರತ ಸರ್ಕಾರವೇ ಕಾರಣ ಎಂದು ಅವರ 21 ವರ್ಷದ ಮಗ ಹಜರತ್ ಅಲಿ, ಪತ್ನಿ ಹಜ್ರಾ ಅಲಿ ಮತ್ತು ಮಗಳು ಆರೋಪಿಸುತ್ತಾರೆ. “ಅಂಬರ್ ಅಲಿಯು ನಮ್ಮ ಹೆಸರುಗಳನ್ನು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯಲ್ಲಿ ದಾಖಲಿಸಲುಕಂಬದಿಂದ ಸರಕಾರೀ ಕಂಬದಿಂದ ಕಂಬಕ್ಕೆ ಓಡುತ್ತಿದ್ದ” ಎಂದು ಹಜ್ರಾ ರೂಸ್ ಹೇಳುತ್ತಾರೆ. “ಡಿಸೆಂಬರ್ 2017ರಲ್ಲಿ ಬಿಡುಗಡೆಯಾದ ಕರಡು ಪಟ್ಟಿಯಿಂದ ನಮ್ಮ ಇಡೀ ಕುಟುಂಬವನ್ನು ಹೊರಗಿಡಲಾಗಿದೆ ಎಂಬ ಅಂಶವನ್ನು ಅವರು ತೀವ್ರವಾಗಿ ಹಚ್ಚಿಕೊಂಡಿದ್ದರು. ಆದ್ದರಿಂದ ಈತ ಹೀಗೆ ಮಾಡಿದ ಎಂದು ಅವರ 55 ವರ್ಷದ ವಿಧವೆ ಹೇಳುತ್ತಾಳೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ನಿರ್ಮಿಸಿರುವ 20 ನಿಮಿಷಗಳ ಸಾಕ್ಷ್ಯ ಚಿತ್ರವನ್ನು 26 ವರ್ಷದ ಅಜರುದ್ದೀನ್ ಪಿಲಕೋಡನ್ ನಿರ್ದೇಶಿಸಿದ್ದಾರೆ. “36 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ, ಎಸ್‌ಐಒವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೈಲೈಟ್ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮಗೆ ದೇಶಾದ್ಯಂತ ಮತ್ತು ಅಸ್ಸಾಂನಲ್ಲಿಯೂ ಸಹ ಕಾರ್ಯಕರ್ತರು ಇದ್ದಾರೆ. ಅವರು ಈ ಚಿತ್ರ ಮಾಡಲು ನಮ್ಮನ್ನು ಸಂಪರ್ಕಿಸಿದರು” ಎಂದು ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಫವಾಜ್ ಶಾಹೀನ್ ಹೇಳುತ್ತಾರೆ.

ಹಾಗಂತ ಎಸ್‌ಐಒ ನಿರ್ಮಿಸಿದ ಮೊದಲ ಚಿತ್ರ ಇದಲ್ಲ. ಎಸ್‌ಐಒ ಭಾರತದ ಭಯೋತ್ಪಾದನೆ ಆರೋಪದ ಮೇಲೆ ಅಕ್ರಮವಾಗಿ ಬಂಧನಕ್ಕೊಳಗಾದವರ ಮೇಲೆ ಸಾಕ್ಷ್ಯ ಚಿತ್ರ ನಿರ್ಮಿಸುವುದಾಗಿ ಕರ್ನಾಟಕದ ಎಸ್‌ಐಒ ಘಟಕವು 2016 ರಲ್ಲಿ ಘೋಷಿಸಿತ್ತು. Unsolved Stories of the Unheard ಶೀರ್ಷಿಕೆಯಲ್ಲಿ ಅದು ಜನರ ಗಮನ ಸೆಳೆದಿತ್ತು. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪದವೀಧರರಾದ ಪಿಲಕೋಡನ್ ಅವರ ಮೊದಲ ಸಾಕ್ಷ್ಯ ಚಿತ್ರ ಇದು. ಆ ಬಳಿಕ ಎಸ್‌ಐಒಗಾಗಿ ಮೊಹಮ್ಮದ್ ಅಮೀರ್ ಖಾನ್ ಅವರ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಿದರು. ಮೊಹಮ್ಮದ್ ಅಮೀರ್ ಖಾನ್ ರನ್ನು 1997ರಲ್ಲಿ ಪೊಲೀಸರು ಬಂಧಿಸಿ 14 ವರ್ಷಗಳ ಕಾಲ ಜೈಲಲ್ಲಿಟ್ಟು ಬಳಿಕ ನಿರಪರಾಧಿಯೆಂದು ಬಿಡುಗಡೆಗೊಳಿಸಿದರು.

ಅಸ್ಸಾಂನ ಬಗ್ಗೆ ಎಸ್‌ಐಒ ಚಿತ್ರ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ, ಸ್ಟೇಟ್ ಆಫ್ ಡೌಟ್ ಎಂಬ ಹೆಸರಲ್ಲಿ ಸಾಕ್ಷ್ಯ ಚಿತ್ರ ಮಾಡಿತು. ಇದು ಎನ್ಆರ್ಸಿಯ ಬೆಳಕಿನಲ್ಲಿ ಅಸ್ಸಾಂನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಆದಾಗ್ಯೂ, ಈ ಸಾಕ್ಷ್ಯ ಚಿತ್ರದ ನಿರೂಪಣೆ ವಿಭಿನ್ನವಾಗಿದೆ. ಈ ಚಿತ್ರದಲ್ಲಿ, ನಾವು ಕರಡು ಪಟ್ಟಿಯಿಂದ ಹೊರಗಿಡಲ್ಪಟ್ಟ ಕುಟುಂಬಗಳೊಂದಿಗೆ ಮಾತನಾಡಿದ್ದೇವೆ.ಪತ್ನಿಯರು ಮನೆಯಲ್ಲೂ ಅವರ ಪತಿಯಂದಿರು ಜೈಲಲ್ಲೂ ಇದ್ದಾರೆ. ಸಂಪೂರ್ಣ ಕುಟುಂಬಗಳೇ ಜೈಲಲ್ಲಿರುವ ಉದಾಹರಣೆಯೂ ಇದೆ. ಇದು ಹೃದಯ ಕದಡುವಂತಿದೆ” ಎಂದು ಪ್ರಸ್ತುತ ಸಮಾಜಶಾಸ್ತ್ರದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿರುವ ಪಿಲಕೋಡನ್ ಹೇಳುತ್ತಾರೆ.

ಪಟ್ಟಿಯಿಂದ ಹೊರಗಿರುವವರಲ್ಲಿ ಬಂಗಾಳಿ ಹಿಂದೂಗಳು ಮತ್ತು ಮುಸ್ಲಿಮರು ಇದ್ದಾರೆ. ಅವರಲ್ಲಿ ಹೆಚ್ಚಿನವರು ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದವರಲ್ಲ. ಈ ಚಿತ್ರದ ಮೂಲಕ ನಮ್ಮ ಗುರಿ ಇಡೀ ಎನ್‌ಆರ್‌ಸಿ ಪ್ರಕ್ರಿಯೆ ಹೇಗಿದೆ ಎಂಬುದನ್ನು ದೇಶಕ್ಕೆ ತೋರಿಸುವುದಾಗಿದೆ ಎಂದು ಶಾಹೀನ್ ವಿವರಿಸುತ್ತಾರೆ.

ಎನ್‌ಆರ್‌ಸಿಯಿಂದ ಹೊರಗುಳಿದವರಿಗೆ ಇನ್ನೂ ಅವಕಾಶ ಇದೆ. ಈಗ 521 ವಿದೇಶಿಯರ ನ್ಯಾಯಮಂಡಳಿಗಳು ಅಂತಿಮ ಪಟ್ಟಿಯಿಂದ ಹೊರಗುಳಿದ ಜನರ ಪ್ರಕರಣಗಳನ್ನು ನಿರ್ವಹಿಸುತ್ತಿವೆ. ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸುವ ಸಮಯವನ್ನು 60 ದಿನಗಳಿಂದ 120 ದಿನಗಳಿಗೆ ಕೇಂದ್ರ ವಿಸ್ತರಿಸಿದೆ. ಆದರೆ ಅದರ ನಂತರವೂ ಹೆಚ್ಚು ಬದಲಾಗುವುದಿಲ್ಲ ಎಂದು ಶಾಹೀನ್ ಹೇಳುತ್ತಾರೆ. “19.5 ಲಕ್ಷಕ್ಕೂ ಹೆಚ್ಚು ಜನರು ಹೊಸ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ನ್ಯಾಯಮಂಡಳಿಗಳ ಸಂಖ್ಯೆ ಸುಮಾರು 500 ಮತ್ತು ಸಮಯ ಮಿತಿ 120 ದಿನಗಳು. ಇದು ಅಸ್ಸಾಂನ ಜನರಿಗೆ ಸಹಾಯ ಮಾಡುವುದಿಲ್ಲ” ಎಂದು ಶಾಹೀನ್ ಹೇಳುತ್ತಾರೆ.

ದೆಹಲಿಯ ಗಾಂಧಿ ಪೀಸ್ ಫೌಂಡೇಶನ್‌ನಲ್ಲಿ ಶನಿವಾರ ಸ್ಟೇಟ್‌ಲೆಸ್ ಅನ್ನು ಪ್ರದರ್ಶಿಸಲಾಯಿತು ಮತ್ತು ಅದೇ ದಿನ ಯೂಟ್ಯೂಬ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಬಿಡುಗಡೆ ಮಾಡಲಾಯಿತು.