ಸೌದಿ ಅರೇಬಿಯದೊಳಗೆ ತೈಲ ದರ ಇಳಿಕೆ

0
953

ಸನ್ಮಾರ್ಗ ವಾರ್ತೆ

ರಿಯಾದ್,ಅ.21: ಸೌದಿ ಅರೇಬಿಯದೊಳಗೆ ಹೆಚ್ಚಿಸಲಾಗಿದ್ದ ತೈಲ ಬೆಲೆಯನ್ನು ಇಳಿಮುಖಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸೌದಿ ಪ್ರೆಸ್ ವರದಿ ಮಾಡಿದೆ.

ಈಗ Gasolineನ ಬೆಲೆಯನ್ನು ಸೌದಿ ಅರಾಮ್ಕೊ ಕಡಿಮೆ ಮಾಡಿದ್ದು, ಗಾಸೊಲೈನ್ 91 ಅನ್ನು ಒಂದೂವರೆ ಸೌದಿ ರಿಯಾಲಿಗೆ ಇಳಿಕೆಗೊಳಿಸಲಾಗಿದೆ. ಹಿಂದೆ ಇದಕ್ಕೆ 1.53 ರಿಯಾಲ್ ದರ ಇತ್ತು. Gasoline 95 ದರ ಕಡಿಮೆ ಮಾಡಲಾಗಿದೆ. 2.05 ರಿಯಾಲ್‍‌ಗೆ ಇಳಿಕೆಯಾಗಿದೆ. ನಿರಂತರ ನಾಲ್ಕನೆ ಹಂತದ ಬೆಲೆ ಇಳಿಕೆಯಿದು. ಅಕ್ಟೋಬರ್ 20ರಿಂದ ಇದು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಅರಮ್ಕೊಕ್ಕೆ ಭಯೋತ್ಪಾದಕ ದಾಳಿಯಾದ ಬಳಿಕ ತೈಲ ಬೆಲೆಯೇರಿಕೆ ನಡೆದಿತ್ತು.