ಸನ್ಮಾರ್ಗ ವಾರ್ತೆ
ರಿಯಾದ್: ಸೌದಿ ಅರೇಬಿಯಾ ಮಂಗಳವಾರ ಕ್ಯಾಬಿನೆಟ್ ಅನುಮೋದನೆಯ ನಂತರ ಸಿಂಗಲ್ ಎಂಟ್ರಿ ವಿಸಿಟ್ ವೀಸಾದ ಮಾನ್ಯತೆಯನ್ನು 30 ದಿನಗಳಿಂದ ಮೂರು ತಿಂಗಳವರೆಗೆ ವಿಸ್ತರಿಸಿದೆ.
ಪ್ರತಿ ಟ್ರಾನ್ಸಿಸ್ಟ್ ವೀಸಾದ ವಾಸ್ತವ್ಯ ಅವಧಿಯನ್ನು ಯಾವುದೇ ಹೆಚ್ಚವರಿ ಶುಲ್ಕವಿಲ್ಲದೇ 96 ಗಂಟೆಗಳಿಗೆ ಹೆಚ್ಚಿಸಲಾಗಿದ್ದು, ಟ್ರಾನ್ಸಿಸ್ಟ್ ವೀಸಾ ಮೂರು ತಿಂಗಳ ಸಿಂಧುತ್ವವನ್ನು ಹೊಂದಿದೆ.
ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ವೀಸಾ ಯೋಜನೆಗಳಲ್ಲಿನ ಬದಲಾವಣೆಗಳನ್ನು ಅನುಮೋದಿಸಲಾಗಿದೆ. ಹೊಸ ಯೋಜನೆಯು ಎಲ್ಲಾ ಉದ್ದೇಶಗಳಿಗಾಗಿ ನೀಡಲಾಗುವ ಸಿಂಗಲ್ ಎಂಟ್ರಿ ವಿಸಿಟ್ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ.